ಈರುಳ್ಳಿ, ಬೆಳ್ಳುಳ್ಳಿ ಆಯ್ತು, ಟೊಮೆಟೊ ದರ ನೋಡಿದ್ರೆ ಟಾಟಾ ಹೇಳಬೇಕಷ್ಟೇ

Sampriya

ಶನಿವಾರ, 5 ಅಕ್ಟೋಬರ್ 2024 (15:56 IST)
Photo Courtesy X
ಬೆಂಗಳೂರು: ನವರಾತ್ರಿ ಹಬ್ಬ ಆರಂಭಗೊಳ್ಳುತ್ತಿದ್ದ ಹಾಗೇ ಜನಸಾಮಾನ್ಯರಿಗೆ ದಿನನಿತ್ಯ ಬಳಸುವ ತರಾಕರಿಗಳ ಬೆಲೆ ಮತ್ತುಷ್ಟು ಏರಿಕೆಯಾಗುತ್ತಿದೆ. ಈರುಳ್ಳಿ, ಬೆಳ್ಳುಳ್ಳಿ ದರ ಏರಿಕೆ ಬೆನ್ನಲ್ಲೇ ಗ್ರಾಹಕರಿಗೆ ಟೊಮೆಟೊ ದರ ಏರಿಕೆಗೆ ಜನ ಸುಸ್ತಾಗಿದ್ದಾರೆ.

ಅಕಾಲಿಕ ಮಳೆಯಿಂದಾಗಿ ಟೊಮೆಟೊ ಇಳುವರಿ ಕುಸಿತಗೊಂಡಿರುವುದೇ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಇನ್ನು ನವರಾತ್ರಿ ಶುರುವಾದ ಹಿನ್ನೆಲೆ ಬೇಡಿಕೆ ಜಾಸ್ತಿಯಾಗಿದ್ದು, ಪೊರೈಕೆ ಕಡಿಮೆಯಿರುವ ಕಾರಣ ಟೊಮೆಟೋ ಬೆಲೆ ದಿಢೀರ್ ಜಾಸ್ತಿಯಾಗಿದೆ. ಕೆಜಿ 40ರೂಪಾಯಿ ಇದ್ದ ಟೊಮೆಟೋ ದರ ಇದೀಗ ಏಕಾಏಕಿ 80ರೂಪಾಯಿಗೆ ಏರಿಕೆಯಾಗಿದೆ.  ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.

ಈಗಾಗಲೇ ಅಕಾಲಿಕ ಮಳೆಯಿಂದಾಗಿ 1 ಕೆಜಿ ಈರುಳ್ಳಿ ದರ 70 ರೂ. ದಾಟಿದೆ. 1 ಕೆಜಿ ಬೆಳ್ಳುಳ್ಳಿ ದರ 500 ರೂ. ಆಗಿದೆ. ಈಗ ಟೊಮೆಟೊ ದರ ಏರಿಕೆಯಿಂದಾಗಿ ದಸರಾ ಹಬ್ಬದ ಸಂದರ್ಭದಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

ಟೊಮೊಟೊ ಜತೆಗೆ ಇನ್ನಿತರ ತರಕಾರಿಗಳ ಬೆಲೆಯೂ ಹೆಚ್ಚಾಗಿದೆ. ವಿವಿಧ ತರಕಾರಿಗಳ ಬೆಲೆ ಕೇಳಿದ ಜನರು ಬೆಚ್ಚಿ ಬೀಳುವುದರ ಜತೆಗೆ ಕೊಂಡುಕೊಳ್ಳಲು ಹಿಂದೆಮುಂದೆ ನೋಡುತ್ತಿದ್ದಾರೆ. ಸೊಪ್ಪಿನ ಬೆಲೆಯೂ ದುಬಾರಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ