ಅಕ್ರಮ ಸಂಬಂಧ : ಎಣ್ಣೆ ಪಾರ್ಟಿಯಲ್ಲಿ ಯುವಕನ ಕೊಲೆ

ಮಂಗಳವಾರ, 19 ಮೇ 2020 (20:31 IST)
ಕುಡಿತದ ನಶೆಯಲ್ಲಿದ್ದ ಯುವಕರಿಬ್ಬರು ಅಕ್ರಮ ಸಂಬಂಧದ ವಿಷಯವಾಗಿ ಆರಂಭಿಸಿದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.

ಬೆಂಗಳೂರಿನಲ್ಲಿ ಕಾರು ಚಾಲಕನಾಗಿದ್ದ ಗಿರೀಶ್ ಕೊಲೆಯಾದ ಯುವಕನಾಗಿದ್ದಾನೆ. ಲಾಕ್ ಡೌನ್ ಸಡಿಲಿಕೆ ನಂತರ ತನ್ನ ಊರಾದ ತುಮಕೂರಿನ ಕೊರಟಗೆರೆಯ ಮಲ್ಲೇಶಪುರಕ್ಕೆ ಬಂದಿದ್ದನು.

ಮಲ್ಲೇಶಪುರದ ನಂಜುಂಡಪ್ಪನ ಮಗ ನಟರಾಜ್ ಜೊತೆ ಗಿರೀಶ್ ಜೊತೆ ಎಣ್ಣೆ ಪಾರ್ಟಿ ಮಾಡುತ್ತಿದ್ದ. ಆಗ ಅನೈತಿಕ ಸಂಬಂಧ ವಿಷಯವಾಗಿ ಕಿತ್ತಾಡಿಕೊಂಡಿದ್ದು, ನಟರಾಜು ಜಗಳದಲ್ಲಿ ಗಿರೀಶ್ ನನ್ನು ಕೊಲೆ ಮಾಡಿದ್ದಾನೆ.

ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ