ಅಕ್ರಮ ಗೋ ಸಾಗಾಟ ವಾಹನ ವಶಕ್ಕೆ

ಮಂಗಳವಾರ, 13 ನವೆಂಬರ್ 2018 (19:24 IST)
ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ.

ಐದು ಜಾನುವಾರು ರಕ್ಷಣೆ ಮಾಡಲಾಗಿದೆ. ಗೋ ಸಾಗಾಟ ಮಾಡುತ್ತಿದ್ದ ಬೊಲೆರೋ ವಶಪಡಿಸಿಕೊಳ್ಳಲಾಗಿದೆ.
ಕುಂದಾಪುರದ ಕೆರಾಡಿಯಲ್ಲಿ ಘಟನೆ ನಡೆದಿದೆ. ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೆರಾಡಿಯಲ್ಲಿ ಗೋವುಗಳ ಕಾಲು ಕಟ್ಟಿ ಹಿಂಸಾತ್ಮಕವಾಗಿ ಸಾಗಾಟ ಮಾಡಲಾಗುತಿತ್ತು.

ಖಚಿತ ಮಾಹಿತಿ ಮೇರೆಗೆ ಹಿಂದೂ ಕಾರ್ಯಕರ್ತರ ಕಾರ್ಯಾಚರಣೆ ನಡೆಯಿತು. ‌ ಮಂಜಾನೆ ವೇಳೆ ಗೋ ರಕ್ಷಣೆ ಕಾರ್ಯಾಚರಣೆ ನಡೆಯಿತು. ಬೊಲೆರೋ ಪಿಕಪ್ ವಾಹನದಲ್ಲಿದ್ದ ಗೋವುಗಳನ್ನು, ವಾಹನ ಬಿಟ್ಟು ಚಾಲಕ ಪರಾರಿಯಾದನು.
ವಾಹನ, ಜಾನುವಾರುಗಳು ಪೊಲೀಸರ ವಶಕ್ಕೆ ಒಳಪಟ್ಟವು. ಕೊಲ್ಲೂರು ಪೊಲೀಸರಿಂದ ತನಿಖೆ ಮುಂದುವರಿದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ