ಯಾವುದೇ ಕ್ಷಣದಲ್ಲಿ ಸಮ್ಮಿಶ್ರ ಸರಕಾರ ಪತನ ಆಗುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಹೇಳಿದ್ದಾರೆ. ಇವರು ಪ್ರತಿನಿತ್ಯ ಕುರ್ಚಿಗಾಗಿ ಕಚ್ಚಾಟ ನಡೆಸುತ್ತಿದ್ದು ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಹೇಳಿದ್ದಾರೆ.
ಮಂಗಳೂರುನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ. ವಿ. ಸದಾನಂದ ಗೌಡ, ಸಮಿಶ್ರ ಸರಕಾರ ಯಾವಾಗ ಹೋಗುತ್ತದೆ ಎಂದು ಜನರು ಕಾಯುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಪಕ್ಷಗಳು ತಮ್ಮ ತಮ್ಮ ಕುರ್ಚಿ ಉಳಿಸುಕೊಳ್ಳಲು ಹೋರಾಟ ಮಾಡುತ್ತಿವೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ಅಧಿಕಾರಿಗಳು ತಮಗೆ ಇಸ್ಟ್ಟ ಬಂದಂತೆ ಆಡಳಿತ ನಡೆಸುತ್ತಿದ್ದಾರೆ. ಈ ಸರಕಾರ ಹೆಚ್ಚು ಬಾಳುವುದಿಲ್ಲ ಎಂದು ಹೇಳಿದರು .
ರಾಜ್ಯದಲ್ಲಿ ಇಷ್ಟು ಮಳೆಯಾಗುತ್ತಿದ್ದರು ಕೂಡ ಇನ್ನು ಕೂಡ ಸರಕಾರ ಸಭೆ ನಡೆಸಿಲ್ಲ. ಯಾವುದೇ ಪರಿಹಾರ ನೀಡಿಲ್ಲ. ಜನರು ನೀರಿನಲ್ಲಿ ಮುಳುಗುತಿದ್ದಾರೆ. ಆದ್ರೂ ಇವರಿಗೆ ಕ್ಯಾರೇ ಇಲ್ಲ. ಇವರಿಗೆ ಇವರು ನಾಳೆ ಮುಳುಗಿ ಹೋಗುತ್ತಾರೆ ಎಂದು ಗೊತ್ತಿದೆ. ಅದಕ್ಕೆ ಇವರು ಏನೂ ಅಭಿವೃದ್ಧಿ ಮಾಡುವುದಿಲ್ಲ ಎಂದು ಹೇಳಿದರು.