ಬೆಂಗಳೂರು: ಕೋವಿಡ್ ಸಂಕಷ್ಟದ ಸಮಯದಲ್ಲಿ ಅತ್ಯಂತ ಮಹತ್ವದ ಸೇವೆ ಸಲ್ಲಿಸಿದವರೆಂದರೆ ಆರೋಗ್ಯ ಕಾರ್ಯಕರ್ತರು. ಅವರಲ್ಲಿ ಬೇಡರು ತಮ್ಮ ಕುಟುಂಬವನ್ನೇ ನಿರ್ಲಕ್ಷಿಸಿ ಸಮಾಜದ ಸೇವೆಗೆ ನಿಂತರು. ಅಂತಹ ನಿಸ್ವಾರ್ಥ ಕಾರ್ಯಕರ್ತರಿಗೆ ಗೌರವ ಸಲ್ಲಿಸಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯ. ಆದರೆ ಅವರಿಗೆ ಗೌರವ ಸಲ್ಲಿಸುವುದು ಹಾಗಿರಲಿ, ಕನಿಷ್ಠ ಅವರ ಹಕ್ಕಿನ ನ್ಯಾಯವೂ ಸಿಗುತ್ತಿಲ್ಲ. ಈ ವರ್ಷ ಎಂಡಿ ಪರೀಕ್ಷೆ ಬರೆದಿರುವವರು ಆರೋಗ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಲು. ಅವರು ಬರೆದ ಪರೀಕ್ಷೆಯ ಮೌಲ್ಯಮಾಪನ ಸರಿಯಾಗಿರದೆ ಹೋದಲ್ಲಿ ಮರುಮೌಲ್ಯಮಾಪನ ಮಾಡಿಸಿಕೊಳ್ಳಬೇಕಾದದ್ದು ಸಹಜ ಹಕ್ಕು. ಆರೋಗ್ಯ ಕಾರ್ಯಕರ್ತರ ಈ ಹಕ್ಕನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಿರಾಕರಿಸುತ್ತಿದೆ. ಅವನು ಮಾಡಿದ್ದೇ ಸರಿ, ತನ್ನ ಮೌಲ್ಯಮಾಪಕರು ದೈವಾಂಶ ಸಂಭೂತರು, ಪ್ರಶ್ನಾತೀತರು ಎಂದು ರಾಆವಿವಿ (ರಾಜೀವ್ ಗಾಂಧಿ ಅರೋಗ್ಯ ವಿಶ್ವವಿದ್ಯಾಲಯಾನಿಲಯ) ಭಾವಿಸಿದಂತಿದೆ. ಈ ಹಿಂದೆ ಇದೇ ರೀತಿ ಮೊಂಡುತನ ತೋರಿ, ಎರಡು ಬಾರಿ (2019 & 2020) ಹೈಕೋರ್ಟ್ ನಿಂದ ತಪರಾಕಿ ಹಾಕಿಸಿಕೊಂಡರೂ ವಿವಿಗೆ ಬುದ್ದಿ ಬಂದಂತಿಲ್ಲ. ಸರ್ಕಾರ ಈ ವಿಚಾರವಾಗಿ ಖಂಡಿತವಾಗಿಯೂ ಮಧ್ಯಪ್ರವೇಶಿಸಿ,