ದೇಶದ ಹಿತ ರಕ್ಷಣೆಗಾಗಿ ರಾಜೀವ್ ಗಾಂಧಿ, ಇಂದಿರಾ ಗಾಂಧಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಆದರೆ, ಬಿಜೆಪಿಯಲ್ಲಿ ದೇಶಕ್ಕಾಗಿ ಪ್ರಾಣ ನೀಡುವವರು ಯಾರು ಇಲ್ಲ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.
ಭಾರತೀಯ ಜನತಾ ಪಾರ್ಟಿ ಕೇವಲ ಗೋ ರಕ್ಷಣೆಯ ಕುರಿತು ಭಾಷಣ ಮಾಡುತ್ತದೆ. ಆದರೆ, ಹಾಲು ಉತ್ಪಾದಕರ ಕುರಿತು ಕಾಂಗ್ರೆಸ್ ಅನೇಕ ಕೊಡುಗೆ ನೀಡಿದ್ದು, ಅವರ ಹೀತ ರಕ್ಷಣೆಯನ್ನು ಕಾಪಾಡಿಕೊಂಡು ಬಂದಿದೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಚ್ಚೆ ದಿನ್ ಆಯೆಂಗೆ ಎಂದು ಹೇಳಿದ್ದಾರೆ. ಅಚ್ಚೆ ದಿನ ಬರದಿದ್ದರು ಪರವಾಗಿಲ್ಲ, ಮತ್ತೆ ಗುಲಾಮಗಿರಿ ದಿನಗಳು ಬರದಿದ್ದರೆ ಸಾಕು ಎಂದು ಸಾರ್ವಜನಿಕರು ಚಿಂತಿಸುತ್ತಿದ್ದಾರೆ ಎಂದು ಇಬ್ರಾಹಿಂ ಹೇಳಿದ್ದಾರೆ.