ರಾಜಧಾನಿಯಲ್ಲಿ ಮೂರನೇ ಅಲೆಯ ಆತಂಕ ಶುರುವಾಗಿದೆ. ಮಕ್ಕಳಲ್ಲಿ ವೈರಲ್ ಜ್ವರ , ಕೆಮ್ಮು ಪ್ರಕರಣಗಳು ಹೆಚ್ಚಿಗೆ ಕಾಣಿಸಿಕೊಳ್ತಿದಿಯಂತೆ,ರಾಜ್ಯಾದ್ಯಂತ ಮಕ್ಕಳಲ್ಲಿ ವೈರಲ್ ಜ್ವರ ಪ್ರಕರಣಗಳು ಹೆಚ್ಚಳವಾಗಿದೆ. ಮೂರನೇ ಅಲೆಯ ಸಮೀಪಿಸುತ್ತಿದ್ದಂತೆ ಮಕ್ಕಳಿಗೆ ಫ್ಲೂ ಜ್ವರ ಸೇರಿದಂತೆ ಇನ್ಫೇಕ್ಷನ್ ಕಂಡುಬರುತ್ತಿದೆ. ಈ ಸೀಸನ್ ನಲ್ಲಿ ಮಕ್ಕಳಲ್ಲಿ ರೋಗ ಲಕ್ಷಣಗಳು ಹೆಚ್ಚಿಗೆ ಕಂಡುಬರುತ್ತಿದೆ. ಮೂರನೇ ಅಲೆ ಹೆಚ್ಚು ಅಪಾಯವಾಗಿದ್ದು, ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಸ್ವೀಂಟಮ್ಸ್ ಕಂಡುಬಂದರೆ ಟೆಸ್ಟ್ ಮಾಡಲಾಗುತ್ತೆ. ಅಷ್ಟೇ ಅಲ್ಲದೇ ಪ್ರತಿ ಶಾಲೆಗೆ ಒಂದರಂತೆ ನೋಡಲ್ ಆಫೀಸ್ ರನ್ನ ನೇಮಕ ಮಾಡಲಾಗುತ್ತೆ. 100 ಟೆಸ್ಟ್ ಮಾಡಿದ್ರೆ ಆದರಲ್ಲಿ 10 ಸ್ಯಾಂಪಲ್ ಮಕ್ಕಳದ್ದೇ ಇರುತ್ತೆ..ಈಗಾಗಲೇ 8% ರಷ್ಟು ಟೆಸ್ಟ್ ಮಾಡಲಾಗ್ತಿದೆ.ಆದಷ್ಟು ಶೀಘ್ರದಲ್ಲಿ ಇನ್ನೇರಡು ಪರ್ಸೆಂಟ್ ಟೆಸ್ಟ್ ಹೆಚ್ಚಿಸಲಾಗುತ್ತೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಧಿಕಾರಿ ವಿಜಯೇಂದ್ರ ಹೇಳಿದ್ದಾರೆ.
ಮೂರನೇ ಅಲೆಯ ವರದಿ ಹಿಂದಿ ಬಂದಿದೆ.ರಾಜ್ಯಾದ್ಯಂತ ಮಕ್ಕಳಲ್ಲಿ ವೈರಲ್ ಜ್ವರ ಹೆಚ್ಚಾಗಿದೆ. ಈಗ ಚಟುವಟಿಕೆಗಳು ಆರಂಭವಾಗಿರುವುದರಿಂದ ಸೀಸನ್ ಫ್ಲ್ಯೂ ಬಂದಿದೆ. ಕಳೆದ ಬಾರಿ ಲಾಕ್ ಡೌನ್ ಇದ್ದಿದ್ರಿಂದ ಶಾಲೆ ಇರಲಿಲ್ಲ, ಮಕ್ಕಳು ಮನೆಯೊಳಗೆ ಇದ್ರು ಸೇಫ್ ಆಗಿದ್ರು. ಈಗ ಆರೋಗ್ಯ ಇಲಾಖೆಯಿಂದ ಮಕ್ಕಳನ್ನ ಸೂಕ್ಷ್ಮವಾಗಿ ಟೆಸ್ಟ್ ಮಾಡಲಾಗ್ತಿದೆ. ಕೊರೋನಾ ಟೆಸ್ಟ್ ಕೂಡ ಮಾಡ್ತಿದೇವೆ. ಎಲ್ಲಾ ಮಕ್ಕಳಿಗೂ ಒಳ್ಳೆಯ ಟ್ರೀಟ್ ಮೆಂಟ್ ಸಿಗಬೇಕು, ಮಕ್ಕಳ ಬೆಡ್ ಸಮಸ್ಯೆ ಗಮನಕ್ಕೆ ಬಂದಿದೆ . ಬಗೆಹರಿಸುವ ಪ್ರಯತ್ನ ಮಾಡುತ್ತೇವೆ . ಅಷ್ಟೇ ಅಲ್ಲದೇ ವೈದ್ಯಕೀಯವಾಗಿ ಹೇಳಯವುದಾದ್ರೆ ಸಣ್ಣಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ರು.ಒಟ್ನಲಿ ಸರ್ಕಾರ ಬಿಬಿಎಂಪಿಯನ್ನ ತರಾಟೆಗೆ ತೆಗೆದುಕೊಂಡು ಸೂಚನೆ ನೀಡಿದೆ. ಹೀಗಾಗಿ ಮೂರನೇ ಅಲೆ ಹೆಚ್ಚಾಗಿ ಮಕ್ಕಳಿಗೆ ಉಲ್ಬಣಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರ ಬಿಬಿಎಂಪಿ ಮುಂದಾಗಿದೆ.