ಕರೋನಾ ಕಡಿಮೆಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ೬ ರಿಂದ ೧೦ ನೇ ತರಗತಿವರೆಗಿನ ಶಾಲೆಗಳು ಆರಂಭವಾಗಿದ್ದು, ಶಾಲೆಗಳಿಗೆ ಮಕ್ಕಳು ದಿನೇ ದಿನೇ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುತ್ತಿದ್ದಾರೆ. ಕರ್ನಾಟಕ ಸರ್ಕಾರ ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸುವ ಪಠ್ಯ ಪುಸ್ತಕ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಇಂದಿನಿAದ ಶಾಲೆಗಳಿಗೆ ವಿತರಿಸಲು ಕರ್ನಾಟಕ ರಾಜ್ಯ ಪಠ್ಯ ಪುಸ್ತಕಗಳ ಮುದ್ರಕರ ಸೊಸೈಟಿ ಪುಸ್ತಕಗಳನ್ನು ಅಂಚಿಕೆ ಮಾಡಲು ಸಿದ್ಧತೆ ನಡೆಸಿಕೊಂಡಿದೆ. ಒಟ್ಟು ೫,೩೪,೭೬,೩೩೬ ಪಠ್ಯ ಪುಸ್ತಕಗಳ ಅವಶ್ಯಕತೆಯಿದ್ದು, ಅದರಲ್ಲಿ ೪,೭೭,೪೩,೦೦೪ ಮುದ್ರಣಗೊಂಡಿದೆ ಹಾಗೂ ೪,೩೫,೫೯,೮೦೭ ಪಠ್ಯ ಪುಸ್ತಕಗಳು ಆಂಚಿಕೆಗೆ ಸಿದ್ಧವಾಗಿದೆ.
ಬೆಂಗಳೂರು ಗ್ರಾಮಾಂತರಕ್ಕೆ ಒಟ್ಟು ಅವಶ್ಯಕತೆ ಇರುವ ಪುಸ್ತಕಗಳು ೭,೫೫,೨೪೧ ವಿತರಣೆಯಾಗಲಿರುವ ಪುಸ್ತಕಗಳು ೭,೨೨,೧೬೦. ಬೆಂಗಳೂರು ಉತ್ತರ ಒಟ್ಟು ಅವಶ್ಯಕತೆ ಇರುವ ಪುಸ್ತಕಗಳು ೧೯,೧೯,೩೬೯ ವಿತರಣೆಯಾಗಲಿರುವ ಪುಸ್ತಕಗಳು ೧೮,೩೯,೯೧೯.