ಬೆಂಗಳೂರು ವಲಯದಲ್ಲಿ ಬಿ ಪಿ ಎಲ್ ಕಾರ್ಡ್ ಗೆ ಹೆಚ್ಚಿದ ಬೇಡಿಕೆ

ಶುಕ್ರವಾರ, 26 ಮೇ 2023 (18:11 IST)
ಬೆಂಗಳೂರು ಉತ್ತರ ವಲಯದಲ್ಲಿ ಒಟ್ಟು 113391 ಬಿ ಪಿ ಎಲ್ ಕಾರ್ಡ್ ದಾರರಿದ್ದಾರೆ.ಬಿ ಪಿ ಎಲ್ ಕಾರ್ಡ್ ಅಪ್ಲಿಕೇಶನ್ 5134 ಹಾಕಿದ್ದಾರೆ.ಎ ಪಿ ಎಲ್ ಕಾರ್ಡ್ ಗೆ 194 ಬಾಕಿ ಉಳಿದಿದೆ.ಬಿ ಪಿ ಎಲ್ ಕಾರ್ಡ್ ದರ ಅಪ್ಲಿಕೇಶನ್ ರಿಜೆಕ್ಟೆಡ್ ಸಂಖ್ಯೆ 1511 ಆಗಿದೆ.ಒಂದು ವಾರದಿಂದ ಬಿಪಿಎಲ್ ಅಪ್ಲಿಕೇಶನ್ ಹಾಕುವವರ ಸಂಖ್ಯೆ ಜಾಸ್ತಿ ಆಗಿದೆ.ಉಚಿತ ಗ್ಯಾರಂಟಿ ಘೋಷಣೆ ನಂತರ ಬಿ ಪಿ ಎಲ್ ಕಾರ್ಡ್ ಮಾಡಿಸುವವರ ಸಂಖ್ಯೆ ಜಾಸ್ತಿ ಆಗಿದೆ.ಆದರೆ ಈಗ ಅಪ್ಲಿಕೇಶನ್ ನಿಲ್ಲಿಸಲಾಗಿದೆ ಎಂದು ಬೆಂಗಳೂರು ಉತ್ತರ ವಲಯದ  ಉಪನಿರ್ದೇಶಕ ನಾಗರಾಜ್ ಹೇಳಿದ್ದಾರೆ
 
ಚುನಾವಣೆಗೂ ಮುಂಚೆ ಅಪ್ಲಿಕೇಶನ್ ಸ್ಟಾಪ್ ಮಾಡಲಾಗಿತ್ತು.ನಂತರ ಅಪ್ಲಿಕೇಶನ್ ಓಪನ್ ಮಾಡುವವರೆಗೂ ಬಿ ಪಿ ಎಲ್ ಕಾರ್ಡ್ ಅಪ್ಲಿಕೇಶನ್ ತೆಗೆದುಗೊಳ್ಳಲು ಸಾಧ್ಯವಿಲ್ಲ.ಬೆಂಗಳೂರ್ ಒನ್ ಮೂಲಕ  ಬಿ ಪಿ ಎಲ್ ಗೆ ಅರ್ಜಿಯನ್ನ ಸಲ್ಲಿಸಲು ಅವಕಾಶ ಇದೆ.ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಮಾಡಿಸುವುದು ಕಡ್ಡಾಯ.ಸರ್ಕಾರದಿಂದ ಆದೇಶ ಬಂದ ನಂತರದಲ್ಲಿ ಬಿ ಪಿ ಎಲ್ ಗೆ ಅಪ್ಲಿಕೇಶನ್ ಹಾಕಬಹುದು ಎಂದು ಬೆಂಗಳೂರು ಉತ್ತರ ವಲಯದ  ಉಪನಿರ್ದೇಶಕ ನಾಗರಾಜ್  ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ