ನಗರದಲ್ಲಿ ಹೆಚ್ಚಾಯ್ತು ಗ್ಲಾಕೋಮಾ

ಭಾನುವಾರ, 17 ಏಪ್ರಿಲ್ 2022 (19:34 IST)
ಕಣ್ಣು ಒಬ್ಬ ಮನುಷ್ಯನಿಗೆ ಎಷ್ಟು ಅವಶ್ಯಕ . ಕಣ್ಣಿಲ್ಲ ಅಂದ್ರೆ ಜೀವನವನ್ನ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಕಣ್ಣು ಮನುಷ್ಯನ್ನ ಅತ್ಯಂತ ಸೂಕ್ಷ್ಮವಾದ ಅಂಗ. ಆದ್ರೆ ಈಗ ಕೋವಿಡ್ ಮುಗಿದ್ಮೇಲೆ ಗ್ಲಾಕೋಮಾ ಗಂಡಾಂತರ ಎದುರಾಗಿದೆ. ಶೇ 90 ರಷ್ಟು ಜನರು ಗ್ಲಾಕೋಮಾದಿಂದ ಬಾಳಲಾಟ ನಡೆಸ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ನೇತ್ರಾ ತಪಾಸಣೆಗೆ ಒಳಗಾಗದ ಕೆಲ ರೋಗಿಗಳಲ್ಲಿ ದೃಷ್ಟಿ ಹಿನ್ನತೆ ಸಮಸ್ಯೆ ಉಲ್ಬಣಿಸುತ್ತಿದೆ. ಹಿರಿಯರಲ್ಲಿ ಕುರುಡುತನಕ್ಕೆ ಗ್ಲಾಕೋಮಾ ಕೂಡ ಒಂದು ಕಾರಣ . ಆದ್ರೆ ಈಗ ಸಾಕಷ್ಟು ಮಂದಿಯಲ್ಲಿ ಗ್ಲಾಕೋಮಾ ಕಂಡುಬರುತ್ತಿದೆ. ಈ ರೋಗ ಇರುವುದು ವ್ಯಕ್ತಿಗೆ ಗೊತ್ತಾಗುವುದಿಲ್ಲ. ರೋಗದ ಲಕ್ಷಣವು ಕಾಣುವುದಿಲ್ಲ. ಆದ್ರೆ ಒಳಗಿನಿಂದ ಕಣ್ಣಿನ ದೃಷ್ಠಿ ಹಿನ್ನತೆಯನ್ನ ಕುಂಠಿತಗೊಳಿಸುತ್ತದೆ
 ಗ್ಲಾಕೋಮ ರೋಗ ಗಂಭೀರ ಹಂತಕ್ಕೆ ಹೋಗುವವರೆಗೂ ದೃಷ್ಟಿಯಲ್ಲಿ ಬದಲಾವಣೆ ಕಾಣುವುದಿಲ್ಲ.ಮಧುಮೇಹ ,ಅಧಿಕ ರಕ್ತದೊತ್ತಡ, ಅಧಿಕ ಪ್ಲಸ್, ಮೈನಸ್ ಗ್ಲಾಸ್ ಪವರ್ ಹೊಂದಿದ್ದರೆ,ಸ್ಟಿರಾಯಿಡ್ ಗಳೊಂದಿಗೆ ಚಿಕಿತ್ಸೆ ಪಡೆದಿದ್ದರೆ  ಕುಟುಂಬದಲ್ಲಿ ಯಾರಿಗಾದ್ರು ಈ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತೆ. ಮನೆಯಲ್ಲಿಯೇ ಆನ್ ಲೈನ್ ಮೂಲಕ ಶಾಲೆ, ಕಚೇರಿ ಕೆಲಸದಿಂದಾಗಿ ಸುದೀರ್ಘವಾಗಿ ಲ್ಯಾಪ್‌ಟಾಪ್ ಬಳಸುವುದರಿಂದ ಈ ಸಮಸ್ಯೆ ಉಲ್ಬಣಿಸುತ್ತೆ.ನಗರದಲ್ಲಿ ಡ್ರೈ ಐ  ಕಣ್ಣಿನ ಸಮಸ್ಯೆ ಕೂಡ  ಶೇ 30 % ಜನರಲ್ಲಿ ಉಲ್ಬಣಿಸಿದೆ. ಕೋವಿಡ್ ಪೂರ್ವದ ಸ್ಥಿತಿಗೆ ಹೋಲಿಸಿದಲ್ಲಿ ಈಗ ರೋಗಿಗಳ ಸಂಖ್ಯೆ 3 ಪಟ್ಟು ಹೆಚ್ಚಳವಾಗಿದೆ. ನಿತ್ಯ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕೂಡ ಹೆಚ್ಚಳವಾಗಿದೆ.ಕಣ್ಣಿನ ಆರೋಗ್ಯವಾಗಿ ಕಾಪಾಡಲು ವೈದ್ಯರ ಸಲಹೆ
 
- 20 ನಿಮಿಷಗಳಿಗೊಮ್ಮೆ ದೂರದ ವಸ್ತುಗಳನ್ನ ವೀಕ್ಷಣೆ ಮಾಡಬೇಕು
 
- ಆಗಾಗ್ಗೆ ಕಣ್ಣನ ಮಿಟುಕಿಸುತ್ತಿರಬೇಕು
 
- ಉತ್ತಮವಾದ ಗಾಳಿ ಬೆಳಕು ಇರುವ ಸ್ಥಳದಲ್ಲಿ ಕೆಲಸ ಮಾಡಬೇಕು
 
- ನಿಯಮಿತವಾಗಿ ಕಣ್ಣಿನ ಆರೋಗ್ಯ ತಪಾಸಣೆ ಮಾಡಿಸಬೇಕು 
 
- ನಿರಂತರವಾಗಿ ಕಂಪೂಟ್ಯರ್ ಮುಂದೆ ಕೆಲಸ ಮಾಡುವುದು ಕಡಿಮೆ ಮಾಡಬೇಕು
 ಕಣ್ಣಿಗೂ ಹೆದುರಾಗಿದೆ ಅಪಾಯ . ಇಂತಹ ವಿಷಯದಲ್ಲಿ ಹೆದರಿ ಜನರು ನಿರ್ಲಕ್ಷ್ಯ ವಹಿಸುತ್ತಿರುವುದು ಎಷ್ಟು ಸರಿನೋ ಏನೋ . ಆಗ ವಹಿಸಿದ ನಿರ್ಲಕ್ಷ್ಯಕ್ಕೆ ಈಗ ಇನ್ನಷ್ಟು ಸಮಸ್ಯೆಯಿಂದ ನರಳಾಡುವಂತೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ