ಸ್ವಾತಂತ್ರ್ಯ ದಿನಾಚರಣೆ: ಪ್ರಥಮ ಬಾರಿಗೆ ನೇರ ಪ್ರಸಾರ
ಸ್ವಾತಂತ್ರ ದಿನಾಚರಣೆ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಾಡುವ ಭಾಷಣ ಸ್ಥಳೀಯ ಭಾಷೆಗಳಿಗೆ ಭಾಷಾಂತರವಾಗಲಿವೆ. ಅಷ್ಟೇ ಅಲ್ಲ, ಕೆಂಪು ಕೋಟೆಯಲ್ಲಿ ನಡೆಯಲಿರುವ ಕಾರ್ಯಕ್ರಮ ವಿಶ್ವವ್ಯಾಪಿ ಪ್ರಸಾರವಾಗಲಿದೆ.
ದೂರದರ್ಶನದ ನಿರೂಪಕರು ನೇರವಾಗಿ ಕೆಂಪು ಕೋಟೆಯಿಂದ ವಿವರ, ಮಾಹಿತಿ ನೀಡಲಿದ್ದಾರೆ. 20 ಭಾಷೆಗಳಿಗೆ ಪ್ರಧಾನಿ ಭಾಷಣ ಭಾಷಾಂತರವಾಗಲಿದೆ. ಸ್ವತಂತ್ರ್ಯೋತ್ಸವದ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಲು ಗೂಗಲ್ ಹಾಗೂ ಯೂಟ್ಯೂಬ್ ಜಾಲತಾಣಗಳ ಸಹಯೋಗದಲ್ಲಿ ಪ್ರಸಾರ ಭಾರತೀ ಮೊದಲ ಬಾರಿ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ನೇರಪ್ರಸಾರದಲ್ಲಿ ಕೆಂಪು ಕೋಟೆಯಲ್ಲಿ ನಡೆಯಲಿರುವ ಎಲ್ಲಾ ಕಾರ್ಯಕ್ರಮಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ನೋಡಬಹುದಾಗಿದೆ.