200ಕೋಟಿ ಡೋಸ್ ಲಸಿಕೆ ಹಾಕುವ ಮೂಲಕ ಭಾರತ ಮತ್ತೊಂದು ಮೈಲಿಗಲ್ಲು

ಭಾನುವಾರ, 17 ಜುಲೈ 2022 (19:58 IST)
ಮಹಾಮಾರಿ ಕೋವಿಡ್ ವಿರುದ್ಧ ಭಾರತದ ಹೋರಾಟಕ್ಕೆ ವಿಶ್ವದಾದ್ಯಂತ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಈ ನಡುವೆ ಕೋವಿಡ್ ಲಸಿಕೆ ಶೇ.90ರಷ್ಟು ಜನರು ಪಡೆದುಕೊಂಡಿದ್ದು, ಈವರೆಗೆ 200ಕೋಟಿ ಡೋಸ್ ಲಸಿಕೆ ಹಾಕುವ ಮೂಲಕ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಡವಿಯಾ ಅವರು ಇಂದಿಗೆ 200 ಕೋಟಿಗೂ ಅಧಿಕ ಡೋಸ್ ಕೊವಿಡ್ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕರೊನಾ ಸಾಂಕ್ರಾಮಿಕ ರೋಗ ಹರಡಿದ 18 ತಿಂಗಳ ಬಳಿಕ 2021 ಜನವರಿ 16 ರಿಂದ ಭಾರತದಲ್ಲಿ ಲಸಿಕೆ ನೀಡುವುದು ಪ್ರಾರಂಭವಾಗುತ್ತದೆ. ಅಲ್ಲಿಂದ ಇಲ್ಲಿಯವರೆಗೂ ಎರಡು ಬಿಲಿಯನ್ ಲಸಿಕೆ ಡೋಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಟ್ವಿಟ್ಟರ್ನಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ #200ಕೋಟಿವ್ಯಾಕ್ಸಿನೇಷನ್ ಎಂಬ ಶೀರ್ಷಿಕೆಯಡಿ ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ