ವಾಷಿಂಗ್ಟನ್: ತೈಲ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ರಷ್ಯಾದಿಂದ ತೈಲ ಖರೀದಿ ಮಿತಿಗೊಳಿಸದಿದ್ದಲ್ಲಿ ಭಾರತಕ್ಕೆ ಭಾರಿ ಸುಂಕ ವಿಧಿಸುವುದಾಗಿ ಎಚ್ಚರಿಕೆ ರವಾನಿಸಿದ್ದಾರೆ.
ರಷ್ಯಾದೊಂದಿಗೆ ತೈಲ ಖರೀದಿಗೆ ಹೋಗುವುದಿಲ್ಲ ಎಂದು ಭಾರತದ ಪ್ರಧಾನಿ ನನಗೆ ಭರವಸೆ ನೀಡಿದ್ದಾರೆ. ಆದರೆ ಅವರು ಮತ್ತೆ ತೈಲ ಖರೀದಿ ಮುಂದುವರೆಸಿದರೆ ಅವರು ಭಾರಿ ಸುಂಕವನ್ನು ಪಾವತಿಸಬೇಕಾಗುತ್ತದೆ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.
ತಮ್ಮ ಮತ್ತು ಪ್ಮೋದಿ ನಡುವಿನ ಇತ್ತೀಚಿನ ದೂರವಾಣಿ ಮಾತುಕತೆ ಬಗ್ಗೆ ತಿಳಿದಿಲ್ಲ ಎಂಬ ಭಾರತ ಸರ್ಕಾರದ ಪ್ರತಿಕ್ರಿಯೆ ಕುರಿತು ಉತ್ತರಿಸಿದ ಟ್ರಂಪ್, ಆ ರೀತಿ ಅವರು ಹೇಳಿದರೆ ಅವರು ಭಾರಿ ಸುಂಕ ಪಾವತಿಸುವುದನ್ನು ಮುಂದುವರೆಸುತ್ತಾರೆ. ಅವರು ಅದನ್ನು ಮಾಡಲು ಬಯಸುವುದಿಲ್ಲ ಎಂದು ನಂಬಿದ್ದೇನೆ ಎಂದಿದ್ದಾರೆ..
ರಷ್ಯಾದಿಂದ ತೈಲ ಖರೀದಿಯನ್ನು ಭಾರತ ನಿಲ್ಲಿಸುತ್ತದೆ ಎಂದು ಪ್ರಧಾನಿ ಮೋದಿ ಅವರಿಗೆ ಭರವಸೆ ನೀಡಿದ್ದಾರೆ ಎಂದು ಬುಧವಾರ ಹೇಳಿದ್ದ ಟ್ರಂಪ್, ಇದನ್ನು ದೊಡ್ಡ ಹೆಜ್ಜೆ ಎಂದು ಕರೆದಿದ್ದರು. ಆದರೆ ಪ್ರಧಾನಿ ಮೋದಿ ಅಂತಹ ಯಾವುದೇ ಹೇಳಿಕೆ ನೀಡಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯಿಸಿತ್ತು.