ಭಾರತ ಬಂದ್: ಸಾರಿಗೆ ಇಲಾಖೆಗೆ ಕೋಟಿ ಕೋಟಿ ನಷ್ಟ

ಸೋಮವಾರ, 10 ಸೆಪ್ಟಂಬರ್ 2018 (16:51 IST)
ತೈಲ ಬೆಲೆ ಏರಿಕೆ ಖಂಡಿಸಿ ಕರೆ ನೀಡಿದ್ದ ಭಾರತ ಬಂದ್ ನಿಂದಾಗಿ ವ್ಯಾಪಾರ, ವಹಿವಾಟು ಅಲ್ಲದೇ ಸಾರಿಗೆ ಆದಾಯದ ಮೇಲೆ ವಿಪರೀತ ನಷ್ಟಕ್ಕೆ ಕಾರಣವಾಗಿದೆ.

ಇಂಧನ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಸಿರುವುದನ್ನು ಖಂಡಿಸಿ ಕರೆ ನೀಡಲಾಗಿದ್ದ ಭಾರತ ಬಂದ್ ನಿಂದಾಗಿ ರಾಜ್ಯದಲ್ಲಿ ಆದಾಯ ನಷ್ಟಕ್ಕೆ ಕಾರಣವಾಗಿದೆ.

ಬಂದ್ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಒಂದೇ ದಿನದಲ್ಲಿ ಅಂದಾಜು 20 ಕೋಟಿ ರೂ. ನಷ್ಟವಾಗಿದೆ. ಇದರಲ್ಲಿ ಕೆ.ಎಸ್.ಆರ್.ಟಿ.ಸಿಗೆ 8.5 ಕೋಟಿ ರೂ., ಬಿಎಂಟಿಸಿಗೆ 4.5 ಕೋಟಿ ರೂ., ಈಶಾನ್ಯ ಸಾರಿಗೆ ಸಂಸ್ಥೆಗೆ 4.5 ಕೋಟಿ ಹಾಗೂ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗೆ 4 ಕೋಟಿ ರೂ. ನಷ್ಟ ಸಂಭವಿಸಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ