ಭಾರತ ಬಂದ್ ಗೆ ಲಾರಿ ಮಾಲೀಕರ ಸಂಘ ಬೆಂಬಲ

ಭಾನುವಾರ, 9 ಸೆಪ್ಟಂಬರ್ 2018 (17:10 IST)
ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಭಾರತ್ ಬಂದ್ ಗೆ ಕರೆ ಕೊಟ್ಟ ಹಿನ್ನಲೆಯಲ್ಲಿ
 ಬಂದ್ ಗೆ ಲಾರಿ ಮಾಲೀಕರ ಸಂಘ ಬೆಂಬಲ‌ ವ್ಯಕ್ತಪಡಿಸಿದೆ.
ತೈಲ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರಕಾರದ ಕ್ರಮ ಖಂಡಿಸಿ ಕರೆ ನೀಡಿರುವ ಭಾರತ ಬಂದ್ ಗೆ  ಮೈಸೂರು ಸಿಟಿ ಲೋಕಲ್ ಲಾರಿ ಮಾಲೀಕರ ಸಂಘ ಬೆಂಬಲ ವ್ಯಕ್ತಪಡಿಸಿದೆ. ಈ ವಿಷಯವನ್ನು ಸಂಘದ ಕಾರ್ಯದರ್ಶಿ ಸೋಮಣ್ಣ‌ ಹೇಳಿದ್ದಾರೆ.
ಯಾರೇ ಬಂದ್‌ ಗೆ ಕರೆ‌ ಕೊಟ್ಟಿದ್ದರೂ ನಾವು ಬೆಂಬಲ ನೀಡುತ್ತಿದ್ದೇವೆ. ಆ ಪಕ್ಷ ಈ ಪಕ್ಷ ಅಂತ‌ ಇಲ್ಲ. ಜನರ ಸಮಸ್ಯೆ ಬಗೆಹರಿಯಬೇಕು ಅಷ್ಟೆ. ಮೂರು ತಿಂಗಳಲ್ಲಿ ಡಿಸೇಲ್ ಬೆಲೆ ದುಪ್ಪಟ್ಟಾಗಿದೆ. ಕೇಂದ್ರ ಸರ್ಕಾರ ನಮಗೆ ಹಿಂದೆಯೂ ಭರವಸೆ ನೀಡಿತ್ತು. ಆದರೆ ಯಾವುದನ್ನು ಕಾರ್ಯ ರೂಪಕ್ಕೆ ತರುತ್ತಿಲ್ಲ. ನಾವು ಸಹ ಹಿಂದೆ ತೈಲ ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ. ಆಗಲು ನಮ್ಮ ಭರವಸೆ ಈಡೇರಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಇಂದಿನವರೆಗೂ ಯಾವುದೇ ಭರವಸೆ ಈಡೇರಿಸಿಲ್ಲ. ಅದಕ್ಕಾಗಿ ನಾವು  ಬಂದ್ ಗೆ ಸಂಪೂರ್ಣ ಬೆಂಬಲ‌ ನೀಡುತ್ತೇವೆ ಎಂದು ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಸೋಮಣ್ಣ ಹೇಳಿಕೆ ನೀಡಿದ್ದಾರೆ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ