ಭಾರತ ದೇಶದ ಸಂಪತ್ತು ಎಷ್ಟು ಲೂಟಿ ಮಾಡಿದರೂ ಕರಗಲ್ಲ: ಕುಮಾರಸ್ವಾಮಿ

ಗುರುವಾರ, 29 ಜೂನ್ 2023 (10:00 IST)
ರಾಮನಗರ : ಭಾರತ ದೇಶದಲ್ಲಿ ಭಗವಂತ ಕೊಟ್ಟಿರುವ ಸಂಪತ್ತು ಎಷ್ಟು ಲೂಟಿ ಮಾಡಿದರೂ ಕರಗಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
 
ಚನ್ನಪಟ್ಟಣದಲ್ಲಿ ಮೈಲನಾಯಕನಹೊಸಳ್ಳಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ರಾಜಮಹಾರಾಜರ ಕಾಲದಲ್ಲಿ ಒಂದು ರೀತಿಯ ಗುಲಾಮಗಿರಿ ಇತ್ತು. ಆ ನಂತರ ಬಂದ ಮೊಘಲರ ಕಾಲದಲ್ಲಿ ಇನ್ನೊಂದು ರೀತಿಯ ಗುಲಾಮಗಿರಿ ಇತ್ತು. ನಂತರ ಬಂದ ಈಸ್ಟ್ ಇಂಡಿಯಾ ಕಂಪನಿಯವರು ನಮ್ಮ ದೇಶವನ್ನೇ ಆಳಿದರು.

ವ್ಯಾಪಾರ ಮಾಡಲು ಬಂದು ದೇಶವನ್ನೇ ಲೂಟಿ ಮಾಡಿಕೊಂಡು ಹೋದ್ರು. ನಮ್ಮ ದೇಶದಲ್ಲಿ ನಾವೇ ಅವರಿಗೆ ತೆರಿಗೆ ಕಟ್ಟಬೇಕಾಯಿತು. ಅದೇ ರೀತಿ ಈಗಿನ ರಾಷ್ಟ್ರೀಯ ಪಕ್ಷಗಳು ಒಂದು ರೀತಿಯ ಈಸ್ಟ್ ಇಂಡಿಯಾ ಕಂಪನಿಯಂತಾಗಿವೆ. ಇದು ನಮ್ಮ ದೇಶದ ಸಂಸ್ಕೃತಿ, ನಮ್ಮದು ಸಂಪದ್ಭರಿತವಾದ ದೇಶ. ಈ ದೇಶದಲ್ಲಿ ಭಗವಂತ ಕೊಟ್ಟಿರುವ ಸಂಪತ್ತು ಎಷ್ಟು ಲೂಟಿ ಮಾಡಿದರೂ ಕರಗಲ್ಲ ಎಂದು ಪ್ರತಿಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ