ಭಾರತ – ಪಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ; ಗಡಿಯಲ್ಲಿ ಕಟ್ಟೆಚ್ಚರ

ಬುಧವಾರ, 28 ಆಗಸ್ಟ್ 2019 (17:08 IST)
ಭಾರತದ ವಿರುದ್ಧ ವಿಶ್ವಸಂಸ್ಥೆಯಲ್ಲಿ ದೂರು ನೀಡಿ ಮುಖಭಂಗಕ್ಕೆ ಒಳಗಾಗಿರೋ ಪಾಕ್ ಇದೀಗ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಿಸುತ್ತಿದೆ.

ವಿವಿಧ ದೇಶಗಳಿಂದ ಕಾಶ್ಮೀರ ವಿಷಯ ಕುರಿತು ಮಂಗಳಾರತಿ ಎತ್ತಿಸಿಕೊಂಡಿರೋ ಪಾಕಿಸ್ತಾನ ಇದೀಗ ಗಡಿಯಲ್ಲಿ ನೂರಾರು ಸಂಖ್ಯೆಯಲ್ಲಿ ಕಮಾಂಡೋಗಳನ್ನು ನಿಯೋಜನೆ ಮಾಡಿದೆ.

ಪಾಕ್ ನ ಕುತಂತ್ರಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭಾರತ ತನ್ನ ಸೇನೆಯನ್ನೂ ಸನ್ನದ್ಧಗೊಳಿಸಿದೆ.

ಜಮ್ಮು – ಕಾಶ್ಮೀರದ ಗಡಿಭಾಗದಲ್ಲಿ 100ಕ್ಕೂ ಹೆಚ್ಚು ವಿಶೇಷ ಭದ್ರತಾ ಕಮಾಂಡೋಗಳನ್ನು ನಿಯೋಜನೆ ಮಾಡಿರೋ ಹಿನ್ನೆಲೆಯಲ್ಲಿ ಭಾರತವೂ ಬಿಗಿ ಭದ್ರತೆ ಹಾಗೂ ಗಡಿ ರೇಖೆಯಲ್ಲಿ ತೀವ್ರ ಕಟ್ಟೆಚ್ಚರ ಕೈಗೊಂಡಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ