ಬೀದಿನಾಯಿಗಳ ರಫ್ತಿಗೆ ಮುಂದಾದ ಪಾಕಿಸ್ತಾನ

ಬುಧವಾರ, 28 ಆಗಸ್ಟ್ 2019 (06:55 IST)
ಪಾಕಿಸ್ತಾನ್ : ತೀವ್ರ ಆರ್ಥಿಕ ಸಮಸ್ಯೆಗೆ ಒಳಗಾದ ಪಾಕಿಸ್ತಾನ ಇದೀಗ ಹಣಕ್ಕಾಗಿ ಬೀದಿನಾಯಿಗಳನ್ನು ರಫ್ತು ಮಾಡಲು ಮುಂದಾಗಿದೆ ಎನ್ನಲಾಗಿದೆ.
ತೀವ್ರ ಹಣಕಾಸಿನ ಸಮಸ್ಯೆಯಿಂದ  ಬಳಲುತ್ತಿರುವ ಪಾಕಿಸ್ತಾನ ಈ ಹಿಂದೆ ಕತ್ತೆಗಳನ್ನು ಚೀನಾಗೆ ರಫ್ತು ಮಾಡುತ್ತಿತ್ತು. ಆದರೆ ಈಗ ಯಾವುದೇ ದೇಶ ಅನುದಾನ ನೀಡಲು ಮುಂದಾಗುತ್ತಿಲ್ಲ. ಇದರಿಂದಾಗಿ ಹಣಕಾಸಿನ ಅಭಾವ ಸರಿದೂಗಿಸಲು ಬೀದಿ ನಾಯಿ ರಫ್ತಿಗೆ ಮುಂದಾಗಿದೆ.


ಅಲ್ಲದೇ ಈಗಾಗಲೇ ಸರ್ಕಾರಿ ಸಭೆಗಳಲ್ಲಿ ಕಾಫಿ, ಬಿಸ್ಕೆಟ್ ಮತ್ತು ತಿಂಡಿಗಳನ್ನು ಬ್ಯಾನ್ ಮಾಡಲಾಗಿದೆ. ಇದರ ಜೊತೆಗೆ ಹಲವು ಸರ್ಕಾರಿ ಅತಿಥಿ ಗೃಹಗಳನ್ನು ಬಾಡಿಗೆಗೆ, ಹೊಸ ಉದ್ಯೋಗ ಸೃಷ್ಟಿಗೂ ಕಡಿವಾಣ, ಬೈಕ್ ಅನ್ನು ಬಿಟ್ಟರೆ ವಾಹನಗಳ ಖರೀದಿಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಡಿವಾಣ ಹಾಕಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ