ಭಾರತ ಮೂಲದ ದಂಪತಿ ಅಮೆರಿಕಾದಲ್ಲಿ ಕೊಲೆ, ಆತ್ಮಹತ್ಯೆ

ಗುರುವಾರ, 30 ಏಪ್ರಿಲ್ 2020 (14:31 IST)
ಭಾರತ ಮೂಲದ ದಂಪತಿ ಅಮೆರಿಕಾದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಗರ್ಭಿಣಿಯಾಗಿದ್ದ ಪತ್ನಿ ಗರಿಮಾ ಕೊಠಾರಿ ಮನೆಯಲ್ಲಿ ಕೊಲೆಯಾಗಿದ್ದರೆ, ಪತಿ ಮೋಹನ್ ಶವ ನದಿಯೊಂದರಲ್ಲಿ ಪತ್ತೆಯಾಗಿದೆ.

ಗರಿಮಾ ರನ್ನು ಹರಿತವಾದ ಆಯುಧದಿಂದ ಚುಚ್ಚಿ ಕೊಲೆ ಮಾಡಿ ಆ ಬಳಿಕ ಪತಿ ಮೋಹನ್ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಮೇಲ್ನೋಟಕ್ಕೆ ಶಂಕೆ ವ್ಯಕ್ತಪಡಿಸಿದ್ದಾರೆ.

ದಂಪತಿಯ ಸಾವಿನ ನಿಖರ ಕಾರಣ ಹುಡುಕಲು ಪೊಲೀಸರು ಮುಂದಾಗಿದ್ದಾರೆ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ