ಇಂದಿರಾ ಕ್ಯಾಂಟೀನ್ ಓಪನ್ ಆದ್ರೂ ತಿಂಡಿಯೇ ಇಲ್ಲಾ?!
ಕೆಲವು ಕಡೆ ತಿಂಡಿ ಇಲ್ಲ ಎಂದು ಬೋರ್ಡ್ ಇದ್ದರೆ, ಇನ್ನು ಕೆಲವೆಡೆ ಕೇವಲ ಒಂದು ಗಂಟೆಯೊಳಗೆ ತಿಂಡಿ ಖಾಲಿ ಎನ್ನುತ್ತಿದ್ದರು. ಮತ್ತೆ ಕೆಲವೆಡೆ ಜನರು ಬೆಳಿಗ್ಗೆ 6 ಗಂಟೆಯಿಂದಲೇ ತಿಂಡಿಗಾಗಿ ಕ್ಯೂ ನಿಂತಿದ್ದರೂ, ಸಮಯಕ್ಕೆ ಸರಿಯಾಗಿ ತಿಂಡಿ ಬರಲಿಲ್ಲ. ಹೀಗಾಗಿ ಮೊದಲ ದಿನ ಕೊಂಚ ಗಲಿಬಿಲಿಯಾಗಿದ್ದು ನಿಜ.