ಹಣದುಬ್ಬರ ದರ ಏರಿಕೆ ಅತಿಯಾಗಿಲ್ಲ

ಗುರುವಾರ, 21 ಏಪ್ರಿಲ್ 2022 (21:05 IST)
ಚಿಲ್ಲರೆ ಹಣದುಬ್ಬರ ದರವು ಗರಿಷ್ಠ ಮಿತಿಯನ್ನು ಮೀರಿದ್ದರೂ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಣದುಬ್ಬರ ದರ 'ಅತಿಯಾಗಿಲ್ಲ' ಎಂದು ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ಸವಾಲುಗಳಿವೆ. ಭಾರತದ‍ಲ್ಲಿ ಹಣದುಬ್ಬರ ದರವು ಮಾರ್ಚ್‌ನಲ್ಲಿ ಶೇ 6.9ರಷ್ಟಿದೆ. ಹಣದುಬ್ಬರವು ಗರಿಷ್ಠ ಶೇ 6ರವರೆಗೆ ತಲುಪಲು ಅವಕಾಶವಿದೆ. ಆ ಗಡಿಯನ್ನು ನಾವು ದಾಟಿದ್ದೇವೆ. ಆದರೆ ಹಣದುಬ್ಬರದ ಈ ಏರಿಕೆ ಅತಿಯಲ್ಲ' ಎಂದು ನಿರ್ಮಲಾ ಅಭಿಪ್ರಾಯಪಟ್ಟಿದ್ದಾರೆ. ಮಾರ್ಚ್‌ನಲ್ಲಿ ದೇಶದ ಚಿಲ್ಲರೆ ಹಣದುಬ್ಬರ ದರ 17 ತಿಂಗಳ ಗರಿಷ್ಠ ಮಟ್ಟ ತಲುಪಿದೆ (ಶೇ 6.95). ಮುಂದಿನ ತಿಂಗಳುಗಳಲ್ಲಿ ಚಿಲ್ಲರೆ ಹಣದುಬ್ಬರವು ಇನ್ನಷ್ಟು ಜಾಸ್ತಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ