ಕಾಶ್ಮೀರ ಬಗ್ಗೆ ನಿರ್ಮಲಾ ಸೀತಾರಾಮನ್ ಪ್ರಶ್ನೆ?
ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ನೆಹರೂ ಅವರು ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯುವ ಮೂಲಕ ಅದನ್ನು ಅಂತಾರಾಷ್ಟ್ರೀಯ ವಿಷಯವನ್ನಾಗಿಸಿದ್ದಾರೆ. ಇದು ಆಂತರಿಕ ವಿಚಾರವಾಗಿರುವುದರಿಂದ ಜಾಗತಿಕ ವೇದಿಕೆಗೆ ಹೋಗಬಾರದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಮೊದಲ ಯುದ್ಧ ಪ್ರಾರಂಭವಾದ ನಂತರ 1948ರ ಜನವರಿಯಂದು ನೆಹರೂ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಮನವಿ ಮಾಡಿದ್ದರು.
.
ಜಮ್ಮು ಮತ್ತು ಕಾಶ್ಮೀರಕ್ಕೆ 2022-23ನೇ ಸಾಲಿನಲ್ಲಿ 1.42 ಲಕ್ಷ ಕೋಟಿ ರೂ. ಹಣ ಮೀಸಲಿಡಲು ಬಜೆಟ್ಗೆ ಸಂಸತ್ ಬುಧವಾರ ಅನುಮೋದನೆ ನೀಡಿತು.
ರಾಜ್ಯಸಭೆಯು ಸಂಬಂಧಿತ ಮಸೂದೆಗಳನ್ನು ಲೋಕಸಭೆಗೆ ಹಿಂದಿರುಗಿಸಿತು. ಲೋಕಸಭೆಯು ಮಾರ್ಚ್ 14 ರಂದು ಮಸೂದೆಗಳನ್ನು ಅಂಗೀಕರಿಸಿತ್ತು.