ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುವುದರ ಬಗ್ಗೆ ಮಾಹಿತಿ ನೀಡ್ತೇವೆ

ಮಂಗಳವಾರ, 30 ಮೇ 2023 (17:04 IST)
ಒಂದು ಕಡೆ ಜನ ನಾವು ಕರೆಂಟ್ ಬಿಲ್ಲ್ ಕಟ್ಟೋದಿಲ್ಲ ಅಂತಾರ್ವೆ, ಸರ್ಕಾರ  ಜನರಿಗೆ ಕೊಟ್ಟಿರೋ ಗ್ಯಾರಂಟಿ ಗಳನ್ನ ಈಡೇರಿಸಿ ಅಂತ ಬಿಜೆಪಿ, ಜೆಡಿಎಸ್ ನವರು ಸೌಂಡ್ ಮಾಡ್ತಾರ್ವೆ ಇದೆಲ್ಲದರ ಮಧ್ಯೆ ಮಿನಿಸ್ಟರ್ ಗಳು ಅಧಿಕಾರಿಗಳ ಜತೆ ಮೀಟಿಂಗ್ ಮೇಲೆ ಮೀಟಿಂಗ್ ಮಾಡ್ತೌವರೆ.ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್ ಆರ್ ಟಿಸಿ, ಬೆಂಮಾಸಾ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯ ಎಂಡಿಗಳ ಹಾಗೂ ಅಧಿಕಾರಿಗಳ ಜತೆ ಮಹತ್ವದ ಸಭೆ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿ, ಮಾಹಿತಿ ಯನ್ನ ಪಡೆದ್ರು.ನಾಲ್ಕು ನಿಗಮಗಳು ಮೇ 2013 ರಿಂದ  2023 ರ ವರೆಗೆ  54 ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿ ಗಳನ್ನ ಪಡೆದ ದೇಶದ ಏಕೈಕ ಹೆಮ್ಮೆಯ ಸಾರಿಗೆ ಯಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು.
 
ಇನ್ನೂ ನಾಳೆ  ಸಿಎಂ ಸಿದ್ದರಾಮಯ್ಯ ನವರಿಗೆ ಅಧಿಕಾರಿಗಳ, ಮಾಹಿತಿ ನೀಡುತ್ತೇನೆ. ಗುರುವಾರ ಕ್ಯಾಬಿನೆಟ್ ಮೀಟಿಂಗ್ ಇದೆ ನಂತರ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದ್ರು, ಏನು ನಾವು ಘೋಷಣೆ ಮಾಡಿದ್ದಿವೋ ಅದರಂತೆ ನಡೆದುಕೊಳ್ಳುತ್ತೇವೆ ಯಾವುದೇ ಕಂಡಿಷನ್ಸ್ ಇಲ್ಲದೆ ಯೋಜನೆ ಜಾರಿಗೆ ತಂದೇ ತರುತ್ತೇವೆ ಅದರಲ್ಲಿ  ಯಾವುದೇ ಅನುಮಾನ ಬೇಡ ಎಂದ್ರು. ಅವದಿ ಮುಗಿದಿರುವ ಬಸ್ ಗಳನ್ನ ಅಂದರೆ FC ಯನ್ನ ನವೀಕರಿಸಿ ಹಾಗೆಯೇ ಹೊಸ ಬಸ್ ಗಳಿಗೂ ಕೂಡ ಬೇಡಿಕೆಯಿಟ್ಟಿದ್ದೇವೆ . ಇನ್ನೂ ಬಸ್ ಗಳಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಶೇ 50 ಎಷ್ಟು ಮಹಿಳೆಯರೇ ಇದ್ದಾರೆ ಎಂದ್ರು 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ