ಇನೋಸೆಂಟ್ ಜನರು ಯಾರಿದ್ದಾರೆ ಅವರನ್ನ ಟಚ್ ಮಾಡಿಲ್ಲ- ಪರಮೇಶ್ವರ್

ಮಂಗಳವಾರ, 2 ಜನವರಿ 2024 (15:20 IST)
ಕನ್ನಡಪರ ಹೋರಾಟಗಾರರ ಮನೆ ಮೇಲೆ ರಾತ್ರೋ ರಾತ್ರಿ ಪೊಲೀಸರ ಸರ್ಚ್ ವಾರೆಂಟ್ ವಿಚಾರವಾಗಿ ನಗರದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.ಆ ರೀತಿ ಮಾಡಲು ಹೋಗಿಲ್ಲ.ಯಾರ ಮೇಲೆ ಕೇಸ್ ಮಾಡಿದ್ದಾರೆ ಅವರ ಮನೆ ಸರ್ಚ್ ಮಾಡಿದ್ದಾರೆ.ಇನೋಸೆಂಟ್ ಜನರು  ಯಾರಿದ್ದಾರೆ ಅವರನ್ನ ಟಚ್ ಮಾಡಿಲ್ಲ.ಕರ್ನಾಟಕದ ಪೊಲೀಸರು ಇನ್ನೂ ಆ ರೀತಿ ವರ್ತನೆ ಮಾಡಿಲ್ಲ.ಯಾರಿಗೆ ಕೇಸ್ ಆಗಿರುತ್ತೆ ಅವರನ್ನು ವಿಚಾರಣೆಗೆ ಬನ್ನಿ ಅಂತ‌ ಕರೆದು ಹೋಗಿದ್ದಾರೆ ಅಷ್ಟೇ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
 
ಇನ್ನೂ ಡಿಕೆಗೆ ನೋಟೀಸ್ ಕೊಟ್ಟ ಹಾಗೂ ಡಿಕೆಶಿ ಹೇಳಿಕೆ ವಿಚಾರವಾಗಿ ಅದು ಅವರ ವೈಯಕ್ತಿಕ ವಿಚಾರ.ಸರ್ಕಾರ ಏನು ಮಾಡಬಹುದು ಅಂತ ಕ್ಯಾಬಿನೆಟ್ ತೀರ್ಮಾನ ಮಾಡಿದೆ.ಬಿಎಸ್ ವೈ ಓರಲ್ ಆಗಿ ಹೇಳಿ ಸಿಬಿಐಗೆ ಕೊಟ್ಟಿದ್ದರು.ನಮ್ಮ ಸರ್ಕಾರ ಬಂದಾಗ ನಾವು ಕೇಸ್ ಹಿಂಪಡೆಯಲು ತೀರ್ಮಾನ, ಮಾಡಿ ಕೇಸ್ ವಿತ್ ಡ್ರಾ ಮಾಡಿದ್ದೀವಿ.ವಾಪಸ್ ತೆಗೆದುಕೊಂಡ ಬಳಿಕ ಯಾರಾದ್ರೂ ಕೇಸ್ ನೋಡಬೇಕಲ್ವಾ?ಅದಕ್ಕೆ ಲೋಕಾಯುಕ್ತಕ್ಕೆ ಕೊಡಬೇಕು ಅಂತ ನಮ್ಮ‌ಸರ್ಕಾರ ಆದೇಶ ಮಾಡಿತ್ತು.CBI ಹಾಗೂ ಲೋಕಾಯುಕ್ತ ಅವರು ಏನು ಕ್ರಮ ತಗೊಬೇಕೊ‌ ತಗೊತಾರೆ

.ಸರ್ಕಾರ ಮಾಡುವ ಕೆಲಸ ಏನಿದೆ ಅದನ್ನ ಮಾಡಿದೆ.ಲೋಕಾಯುಕ್ತ ಹಾಗೂ ಸಿಬಿಐ ಕಮ್ಯುನಿಕೇಟ್ ಮಾಡಿಕೊಳ್ಳಬೇಕು.ಅದರ ರೆಕಾರ್ಡ್ಸ್ ಎಲ್ಲಾ CBI ಬಳಿ ಇರುತ್ತೆ.ಲೀಗಲ್ ವಿಚಾರಗಳ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ.ಮುಂದೆ ನೋಡೋಣ ಏನಾಗುತ್ತದೆ ಅಂತ ಪರಮೇಶ್ವರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ