ಅಫ್ಗಾನಿಸ್ತಾನ ಮೇಲೆ ಮತ್ತೇ ಪ್ರತೀಕಾರ ತೀರಿಸಿಕೊಂಡ ಪಾಕ್, ಗಡಿಯಲ್ಲಿ ಹೆಚ್ಚಿದ ಸಂಘರ್ಷ
ಪಾಕಿಸ್ತಾನದಲ್ಲಿ ದಾಳಿಗಳನ್ನು ಹೆಚ್ಚಿಸಿರುವ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಫ್ಗಾನಿಸ್ತಾನದ ತಾಲಿಬಾನ್ ಸರ್ಕಾರವನ್ನು ಪಾಕಿಸ್ತಾನ ಒತ್ತಾಯಿಸಿತ್ತು. ಅಫ್ಗಾನಿಸ್ತಾನದಿಂದಲೇ ಉಗ್ರರು ಕಾರ್ಯಾಚರಿಸುತ್ತಿದ್ದಾರೆ ಎಂದು ಪಾಕಿಸ್ತಾನ ಹೇಳಿತ್ತು. ಅದಾದ ಬಳಿಕ ಈ ಬೆಳವಣಿಗೆ ನಡೆದಿದೆ.