ಜನವರಿ 16-18ರವರೆಗೆ ಇನ್ನೋವೇಶನ್ ಮೇಳ

ಗುರುವಾರ, 6 ಡಿಸೆಂಬರ್ 2018 (18:49 IST)
ಬಿಸಿಲೂರು ಖ್ಯಾತಿಯ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ  ಜನವರಿ 16 ರಿಂದ 18ರವರೆಗೆ ಇನ್ನೋವೇಶನ್ ಮೇಳ (ಅರಿಷ್ಕಾರೋತ್ಸವ)ವನ್ನು ಆಯೋಜಿಸಲಾಗಿದೆ.  

ವಿದ್ಯಾರ್ಥಿಗಳು, ಸಾರ್ವಜನಿಕರು ಈ ಇನ್ನೋವೇಶನ್ ಮೇಳದಲ್ಲಿ ತಾವು ಮಾಡಿದ ನವ ನವೀನ ಸಂಶೋಧನೆಗಳನ್ನು, ಸಾಧನ, ಸಾಮಗ್ರಿಗಳನ್ನು ಪ್ರದರ್ಶಿಸಲು ಇದೊಂದು ಸುವರ್ಣಾವಕಾಶ. ವಿಜ್ಞಾನ, ತಂತ್ರಜ್ಞಾನ, ಗಣಿತ, ಕಲೆ, ಕೃಷಿ, ಇಂಜಿನಿಯರಿಂಗ್, ವೈದ್ಯಕೀಯ, ಔಷಧ ವಿಜ್ಞಾನ, ಆಭರಣ, ಕರಕುಶಲ ಕ್ಷೇತ್ರದಲ್ಲಿ ಮಾಡಿದ ನಾವೀನ್ಯತೆ, ಮಾನವನ ಜೀವನ ಮತ್ತು ಶಿಕ್ಷಣದ ಗುಣಮಟ್ಟ ಸುಧಾರಿಸಲು ಮಾಡಿದ ಸಾಮಗ್ರಿ, ಸಾಧನ, ಪರಿಕರ, ಇನ್ನಿತರ ಕ್ಷೇತ್ರಗಳಲ್ಲಿ ತಾವು ಪ್ರಯೋಗ ಮಾಡಿ ಕಂಡು ಹಿಡಿದ ಸಾಧನ, ನಾವೀನ್ಯತೆ, ಪ್ರಾಜೆಕ್‍ಗಳ ವಿವರಣಾತ್ಮಕ ಮಾದರಿಗಳನ್ನು ಈ ಮೇಳದಲ್ಲಿ ಪ್ರದರ್ಶಿಸಬಹುದಾಗಿದೆ. 
ಆಸಕ್ತಿಯುಳ್ಳ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು, ಐಟಿಐ, ಪಾಲಿಟೆಕ್ನಿಕ್, ಇಂಜಿನಿಯರಿಂಗ್, ಸ್ನಾತಕೋತ್ತರ ವಿದ್ಯಾರ್ಥಿಗಳು, ಇತರೆ ಸಂಶೋಧಕರು- ಸಾಧಕರು ತಮ್ಮ ಮಾದರಿಗಳ/ ಪ್ರಯೋಗಗಳ ವಿವರಣೆಯನ್ನು ವಿಜ್ಞಾನ ಕೇಂದ್ರಕ್ಕೆ ಕಳುಹಿಸಬಹುದಾಗಿದೆ. ಆಯ್ಕೆ ತಂಡದಿಂದ ವಿಶ್ಲೇಷಣೆಗೊಂಡು ಆಯ್ಕೆಯಾದ ಮಾದರಿ, ಸಾಧನ, ಪ್ರಯೋಗಗಳನ್ನು ಮಾತ್ರ ಈ ಮೇಳದಲ್ಲಿ ಪ್ರದರ್ಶಿಸಬಹುದಾಗಿದೆ. 

ಇದಲ್ಲದೇ ಇನ್ನಿತರ ಚಟುವಟಿಕೆಗಳಾದ ಕಸದಿಂದ ರಸ, ನೀವೇ ತಯಾರಿಸಿ ಕಮ್ಮಟ, ಪವಾಡದ ಹಿಂದಿರುವ ವಿಜ್ಞಾನ, ಕಾಗದದಿಂದ ವಿವಿಧ ಆಕೃತಿಗಳ ರಚನಾ ಕಾರ್ಯಾಗಾರ, ಕ್ಲೇಮಾಡಲಿಂಗ್, ಇತ್ಯಾದಿಗಳು, ಸಂಶೋಧಕರ, ಸಾಧಕರ ಪ್ರಯೋಗ ಮತ್ತು ಮಾದರಿಗಳಲ್ಲದೆ ವಿವಿಧ ಸ್ಟಾರ್ಟ್‍ಅಪ್ ಕಂಪನಿಗಳು, ವಿವಿಧ ಇಲಾಖೆಗಳಲ್ಲಿ ಆಗುತ್ತಿರುವ ಸಂಶೋಧನೆ, ನಾವೀನ್ಯತೆಗಳ ಕುರಿತು ಹಾಗೂ ಸೌಲಭ್ಯಗಳ ಕುರಿತು ಪ್ರದರ್ಶಿಸಲು ಈ ಮೇಳದಲ್ಲಿ ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿ ಅರ್ಜಿ ನಮೂನೆಗಳಿಗಾಗಿ ಜಿಲ್ಲಾ ವಿಜ್ಞಾನ ಕೇಂದ್ರ ವೆಬ್‍ಸೈಟ್ http://www.sciencecentrekalaburagi.org.in and http://www.gulbarga.nic.in/dsckalaburagi ನ್ನು ಸಂಪರ್ಕಿಸಿ ಪಡೆದು ಭರ್ತಿ ಮಾಡಿ ಜಿಲ್ಲಾ ವಿಜ್ಞಾನ ಕೇಂದ್ರದ ಇ-ಮೇಲ್ [email protected] ವಿಳಾಸಕ್ಕೆ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ ವಿಜ್ಞಾನ ಕೇಂದ್ರದ ದೂರವಾಣಿ   08472-270608, ಮೊಬೈಲ್ ಸಂಖ್ಯೆ 9743440884 ಗೆ ಸಂಪರ್ಕಿಸಬಹುದು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ