ಚಿಲುಮೆ ಸಂಸ್ಥೆಯಲ್ಲಿ ಪರಿಶೀಲನೆ
ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹಲಸೂರು ಗೇಟ್ ಇನ್ಸ್ಪೆಕ್ಟರ್ ಚಿಲುಮೆ ಸಂಸ್ಥೆಯಲ್ಲಿದ್ದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಕಚೇರಿಯಲ್ಲಿದ್ದ ಕಂಪ್ಯೂಟರ್ ಸೇರಿ ಹಲವು ದಾಖಲೆಗಳನ್ನ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗ್ತಿದೆ. 10ಕ್ಕೂ ಹೆಚ್ಚು ಸಿಬ್ಬಂದಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ನಿನ್ನೆ ಟೆಕ್ನಿಕಲ್ ಟೀಂನಿಂದಲೂ ಕಚೇರಿಯಲ್ಲಿ ಪರಿಶೀಲನೆ ನಡೆಸಲಾಗಿದೆ. ಚಿಲುಮೆ ಸಂಸ್ಥೆಯ ನಿರ್ದೇಶಕಿ ಐಶ್ವರ್ಯಾರನ್ನು ವಿಚಾರಣೆ ನಡೆಸಲಾಗ್ತಿದೆ. ನಾಪತ್ತೆಯಾಗಿರೋ ಕೃಷ್ಣಪ್ಪ ರವಿಕುಮಾರ್ಗಾಗಿ ತಲಾಶ್ ನಡೆಸಲಾಗ್ತಿದೆ. ಸಂಸ್ಥೆಯ 20ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಿಚಾರಣೆ ನಡೆಸ್ತಿದ್ದಾರೆ.