ಚಿಲುಮೆ ಡೇಟಾ ಸಂಗ್ರಹ ವಿಷಯಕ್ಕೆ ಸಂಬಂಧಪಟ್ಟಂತೆ ಸಂಸದ ಪಿ ಎಸ್ ಐ ಮೋಹನ್ ಹೇಳಿಕೆ ನೀಡಿದ್ದು, ಕಾಂಗ್ರೆಸ್ ನವರಿಗೆಲ್ಲ ನಾರಾಯಣ ಅವರ ಮೇಲೆ ಹೊಟ್ಟೆ ಉರಿ ಇದೆ.ಹೊಟ್ಟೆ ಊರಿಗೆ ಇಲ್ಲ ಸಲ್ಲದ ಆರೋಪ ಮಾಡ್ತಿದಾರೆ ಕಾಂಗ್ರೆಸ್ ನವರು.ಅಶ್ವಥ ನಾರಾಯಣ ಅವರು ಮಂತ್ರಿಯಾಗಿ ಸಮಾಜದಲ್ಲಿ ಬೆಳೆದಿದ್ದಾರೆ, ಒಳ್ಳೆ ಕೆಲಸ ಮಾಡ್ತಿದ್ದಾರೆ.ಇದನ್ನು ಕಾಂಗ್ರೆಸ್ ನವರು ಸಹಿಸದೇ ಈ ರೀತಿ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ವಿರುದ್ಧ ಪಿಸಿ ಮೋಹನ್ ಕಿಡಿಕಾರಿದ್ದಾರೆ.
ಪ್ರಕರಣದ ತನಿಖೆ ಮಾಡುವ ಬಗ್ಗೆ ಸಿಎಂ ಹೇಳಿದ್ದಾರೆ.ಏನೇ ಲೋಪ ದೋಷ ಕಂಡುಬಂದರೆ ಸಿಎಂ ಕ್ರಮ ತಗೋತಾರೆ.ಕಾಂಗ್ರೆಸ್ ಮಾಡಿರುವ ಹುರುಳಿಲ್ಲ.ಬೆಂಗಳೂರಿನಲ್ಲಿ ಜಿಲ್ಲೆಗಳಿಂದ ಸಾಕಷ್ಟು ಜನ ಹೊರಗಿಂದ ಬಂದಿದ್ದಾರೆ.ಇಲ್ಲಿ ಬಂದವರ ಬಾಡಿಗೆ ಮನೆಗಳಲ್ಲಿ ವಾಸ ಮಾಡಿ ಏರಿಯಾದರು.ಇವತ್ತು ಮಹಾದೇವಪುರದಲ್ಲಿ ನಾಳೆ ರಾಜಾಜಿನಗರಕ್ಕೆ ಹೋಗ್ತಾರೆ.ನಂತರ ಇನ್ನೊಂದು ಕಡೆಗೆ ಹೋಗ್ತಾರೆ. ಕೆಲಸ ಸಿಗುತ್ತೋ ಅಲ್ಲಿಗೆ ಹೋಗ್ತಾರೆ.ಹೀಗಾಗಿ ಮತದಾರರ ಪಟ್ಟಿಯಲ್ಲಿ ಅವರ ಹೆಸರು ರದ್ದಾಗೋದು ಸಹಜ.
ಮತದಾರರ ಹೆಸರು ರದ್ದಾಗೋದು ಸಹಜ ಪ್ರಕ್ರಿಯೆ.ನಾನೂ ಕೂಡ ಎಂಟು ಚುನಾವಣೆ ಕಂಡಿದ್ದೇನೆ.ಹೀಗಾಗಿ ವೋಟರ್ ಲಿಸ್ಟ್ ಪರಿಶೀಲಿಸಿದಾಗ ವ್ಯತ್ಯಾಸಗಳು ಕಾಣಿಸ್ತಾವೆ.ಜನ ಶಿಫ್ಟ್ ಆಗ್ತಿರ್ತಾರೆ, ಅವರ ಹೆಸರು ಡಿಲೀಟ್ ಮಾಡ್ತಾರೆ, ಸೇರ್ಪಡೆನೂ ಮಾಡ್ತಾರೆ.ಈ ರೀತಿ ಮಾಡೋದರಲ್ಲಿ ತಪ್ಪಿಲ್ಲ ಅಂತಾ ಸಂಸದ ಪಿಸಿ ಮೋಹನ್ ಹೇಳಿದ್ದಾರೆ.