ಅಂತರರಾಜ್ಯಗಳಿಗೆ ಸಂಚರಿಸುವ ಯೆಲ್ಲೊ ಬೋರ್ಡ್ ವಾಹನಗಳಿಗೆ ಹೊಸ ರೂಲ್ಸ್ ವಿವರ ಇಲ್ಲಿದೆ

Krishnaveni K

ಮಂಗಳವಾರ, 4 ಮಾರ್ಚ್ 2025 (11:48 IST)
Photo Credit: X
ಬೆಂಗಳೂರು: ಅಂತರರಾಜ್ಯಗಳಿಗೆ ಸಂಚರಿಸುವ ಯೆಲ್ಲೊ ಬೋರ್ಡ್ ವಾಹನಗಳಿಗೆ ಹೊಸ ನಿಯಮಗಳು ಬಂದಿದ್ದು, ಹೊಸ ನಿಯಮಗಳ ವಿವರ ಇಲ್ಲಿದೆ ನೋಡಿ.
 

ಅಂತರರಾಜ್ಯ ಸಂಚಾರಕ್ಕೆ ಬೇಕಾಗಿದ್ದ ವಿಶೇಷ ಪರ್ಮಿಟ್ ನಿಯಮಗಳನ್ನು ಸರಳೀಕೃತಗೊಳಿಸಿದೆ. ಸ್ಪೆಷಲ್ ಪರ್ಮಿಟ್ ಪಡೆಯಲು ಇನ್ನು ಗಂಟೆಗಟ್ಟಲೆ ಕಾಯಬೇಕಾಗಿಲ್ಲ. ಕೆಲವೇ ಸೆಕೆಂಡುಗಳಲ್ಲಿ ಪರ್ಮಿಟ್ ಸಿಗಲಿದೆ.

ಇಷ್ಟು ದಿನ ಅಂತರರಾಜ್ಯಕ್ಕೆ ತೆರಳುವ ಯೆಲ್ಲೊ ಬೋರ್ಡ್ ವಾಹನಗಳು ಪ್ರತೀ ಬಾರಿಯೂ ಬೆಂಗಳೂರು ಕೇಂದ್ರ ಆರ್ ಟಿಒ ಕಚೇರಿಗೆ ಬಂದು ಮೂಲ ಪ್ರತಿಯನ್ನು ಹಾಜರುಪಡಿಸಿ ಅನುಮತಿ ಪಡೆಯಬೇಕಾಗಿತ್ತು. ಇದು ಚಾಲಕರಿಗೆ ದೊಡ್ಡ ತಲೆನೋವಾಗಿತ್ತು.

ಹೀಗಾಗಿ ಈಗ ಎಲ್ಲವನ್ನೂ ಆನ್ ಲೈನ್ ನಲ್ಲೇ ಕೆಲವೇ ನಿಮಿಷಗಳಲ್ಲಿ ಮಾಡಿ ಮುಗಿಸಲು ಆರ್ ಟಿಒ ಹೊಸ ವ್ಯವಸ್ಥೆ ಜಾರಿಗೆ ತಂದಿದೆ. ಆರ್ ಟಿಒ ನ ವಾಹನ್ 4 ಆಪ್ ನಲ್ಲಿ ನಿಮ್ಮ ವಾಹನದ ದಾಖಲಾತಿಗಳನ್ನು ಅಪ್ ಲೋಡ್ ಮಾಡಿ ನಿಮಿಷಗಳಲ್ಲಿ ಅಂತರರಾಜ್ಯ ಪ್ರಯಾಣಕ್ಕೆ ಅನುಮತಿ ಪಡೆಯಬಹುದಾಗಿದೆ. ಇದಕ್ಕೆ ಕೇವಲ 2,000 ರೂ. ಖರ್ಚಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ