ಗೋಲ್‌ಮಾಲ್: ಪರಪ್ಪನ ಅಗ್ರಹಾರ ಜೈಲಿಗೆ ತನಿಖಾಧಿಕಾರಿ ಭೇಟಿ

ಬುಧವಾರ, 19 ಜುಲೈ 2017 (16:07 IST)
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಗೋಲ್‌ಮಾಲ್ ಬಗ್ಗೆ ತನಿಖೆ ನಡೆಸಲು ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಇಂದು ಜೈಲಿಗೆ ಭೇಟಿ ನೀಡಿದ್ದಾರೆ.
 
ತಮಿಳುನಾಡಿನ ಎಐಎಡಿಎಂಕೆ ನಾಯಕಿ ಶಶಿಕಲಾ ಮತ್ತು ಛಾಪಾ ಕಾಗದ ಹಗರಣ ರೂವಾರಿ ಕರೀಂಲಾಲ್ ತೆಲಗಿ ಕೋಟಿ ಕೋಟಿ ಹಣ ನೀಡಿ ವಿಐಪಿ ಆತಿಥ್ಯ ಪಡೆಯುತ್ತಿದ್ದಾರೆ ಎನ್ನುವ ಬಗ್ಗೆ ಕೆಲದಿನಗಳ ಹಿಂದೆ ಕಾರಾಗೃಹ ಡಿಐಜಿಯಾಗಿದ್ದ ರೂಪಾ ಸರಕಾರಕ್ಕೆ ವರದಿ ಸಲ್ಲಿಸಿದ್ದರು. 
 
ಪರಪ್ಪನ ಜೈಲಿನ ಅವ್ಯವಹಾರಗಳ ಬಗ್ಗೆ ವರದಿ ನೀಡುವಂತೆ ಸಿಎಂ ಸಿದ್ದರಾಮಯ್ಯ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು. ವಾರದೊಳಗೆ ಪ್ರಾಥಮಿಕ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.
 
ಜೈಲಿನ ಕರ್ಮಕಾಂಡದ ತನಿಖೆ ಆರಂಭವಾಗಿದ್ದು, ತನಿಖೆಯಲ್ಲಿ ಸತ್ಯಾಂಶಗಳು ಬಹಿರಂಗವಾಗಲಿವೆಯೇ, ತಪ್ಪಿತಸ್ಥರಿಗೆ ಕಠಿಣೆ ಶಿಕ್ಷೆಯಾಗಲಿದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ