ಸಿದ್ದರಾಮಯ್ಯ ಇರುವವರೆಗೂ ಮಾತ್ರ ಮುಸ್ಲಿಮರು ಸೇಫ್, ಇಲ್ಲಾಂದ್ರ ಚೊಂಬೇ ಗತಿ: ಇಕ್ಬಾಲ್ ಅನ್ಸಾರಿ

Krishnaveni K

ಸೋಮವಾರ, 11 ನವೆಂಬರ್ 2024 (10:40 IST)
ಕೊಪ್ಪಳ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಇರುವವರೆಗೂ ಮಾತ್ರ ಮುಸ್ಲಿಮರು ಸೇಫ್, ಅವರು ಹೋದರೆ ಮುಸ್ಲಿಮರಿಗೆ ಚೊಂಬೇ ಗತಿ ಎಂದು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ. ಪ್ರತೀ ಆರು ತಿಂಗಳಿಗೊಮ್ಮೆ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಬೇಕು. 100 ಕೋಟಿ ರೂ. ಅನುದಾನ ತರಬೇಕು. ಆ ಮೂಲಕ ನಮ್ಮ ಸಮಾಜದ ಕೆಲಸ ಮಾಡಿಸಿಕೊಳ್ಳಬೇಕು ಎಂದು ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.


ಸಿಎಂ ಸಾಹೇಬರು ಇರುವವರೆಗೂ ಮಾತ್ರ ನಾವು-ನೀವು, ನಮ್ಮ ಸಮಾಜ ಏನಾದ್ರೂ ಕೆಲಸ ಮಾಡಿಸಿಕೊಳ್ಳಬೇಕು. ನನ್ನ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಅವರು ಮಾತ್ರ ನಾಯಕ ಎಂದು ಒಪ್ಪಿಕೊಂಡಿದ್ದೇನೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಎಲ್ಲಾ ನಮ್ಮ ನಾಯಕರಲ್ಲ ಎಂದಿದ್ದಾರೆ.

ಅವರ ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಸಿದ್ದರಾಮಯ್ಯ ಯಾವತ್ತೂ ಮುಸ್ಲಿಮರ ಓಲೈಕೆ ಮಾಡುತ್ತಾರೆ ಎಂದು ವಿಪಕ್ಷಗಳು ಆಪಾದನೆ ಮಾಡುತ್ತವೆ. ಇದೀಗ ಇಕ್ಬಾಲ್ ಅನ್ಸಾರಿ ಹೇಳಿಕೆ ಗಮನಿಸಿದರೆ ಇದನ್ನು ಸಮರ್ಥಿಸಿಕೊಂಡಂತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ