ಮಹಿಳೆಯರ ಚಿನ್ನದ ಸರ ಎಗರಿಸುತ್ತಿದ್ದ ಇರಾನಿ ಗ್ಯಾಂಗ್ ಬಂಧನ

ಶನಿವಾರ, 5 ಸೆಪ್ಟಂಬರ್ 2020 (19:29 IST)
ವೃದ್ಧರು ಹಾಗೂ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಚಿನ್ನಾಭರಣ ಕದಿಯುತ್ತಿದ್ದ ಇರಾನಿ ಗ್ಯಾಂಗ್ ಸದಸ್ಯರನ್ನು ಬಂಧನ ಮಾಡಲಾಗಿದೆ.

ಬೆಂಗಳೂರು ಸುತ್ತಮುತ್ತ ಚಿನ್ನಾಭರಣ ದೋಚುತ್ತಿದ್ದ ಆರೋಪಿಗಳಾದ ಇರಾನಿ ಗ್ಯಾಂಗ್ ನ ಹುಸೇನ್, ಅಬುಹೈದರ್, ಸಾದಿಕ್, ಮಹದಿ ಹಸನ್ ರನ್ನು ಸಿಸಿಬಿ ಪೊಲೀಸರು ಬಂಧನ ಮಾಡಿದ್ಧಾರೆ.

ಬಂಧಿತ ಕಳ್ಳರಿಂದ 85 ಲಕ್ಷ ರೂ. ಮೌಲ್ಯದ 1 ಕೆ.ಜಿ. 700 ಗ್ರಾಂ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ