ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಯ ಎಕ್ಸಿಟ್ ಪೋಲ್ನಲ್ಲಿ ಅತಂತ್ರ ಫಲಿತಾಂಶ ಸುಳಿವು ಸಿಗುತ್ತಿದ್ದಂತೆಯೇ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಯವರು ವಿಶ್ರಾಂತಿ ನೆಪದಲ್ಲಿ ಸಿಂಗಾಪುರಕ್ಕೆ ಹಾರಿರುವುದು ಇದೀಗ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ.
ಹೌದು. ಕುಮಾರಸ್ವಾಮಿಯವರು ಸುಮ್ಮನೆ ಕುಳಿತುಕೊಳ್ಳುವ ನಾಯಕರಲ್ಲ. ಹೀಗಾಗಿ ಸಿಂಗಾಪುರ್ ಪಾಲಿಟಿಕ್ಸ್ ಅಸಲಿ ಆಟ ಶುರುನಾ ಎಂಬ ಪ್ರಶ್ನೆ ಮೂಡಿದ್ದು, ಸರ್ಕಾರದ ಮ್ಯಾಜಿಕ್ ಗೇಮ್ ಪ್ಲ್ಯಾನ್ ಏನು ಎಂಬ ಪ್ರಶ್ನೆ ಎದ್ದಿದೆ.
ಯಾವುದೇ ಪಕ್ಷಕ್ಕೆ ಬಹುಮತ ಬರಲ್ಲ ಅನ್ನೋದು ಸಮೀಕ್ಷೆಗಳಲ್ಲಿ ಸ್ಪಷ್ಟವಾಗಿದೆ. ಹೀಗಾಗಿ ಸಿಂಗಾಪುರ್ನಲ್ಲಿ ರಾಜಕೀಯದ ಆಟ ಆಡೋಕೆ ಹೆಚ್ಡಿಕೆ ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಅತಂತ್ರ ಬಳಿಕ ಯಾರ ಜೊತೆ ಹೋಗಬೇಕು ಎಂಬ ಬಗ್ಗೆ ಲೆಕ್ಕಾಚಾರ ಶುರುವಾಗಿದ್ದು, ಕಾಂಗ್ರೆಸ್-ಬಿಜೆಪಿ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.