ಚಿಂಚನಸೂರ್ ಅವಶ್ಯಕತೆ ಕೈ ಪಾಳಯಕ್ಕೆ ಅನಿವಾರ್ಯ?

ಮಂಗಳವಾರ, 21 ಮಾರ್ಚ್ 2023 (08:16 IST)
ಯಾದಗಿರಿ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಕೋಲಿ ಸಮಾಜದ ಮತಗಳೇ ನಿರ್ಣಾಯಕ. ಅದರಲ್ಲೂ ವಿಶೇಷವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಸ್ಪರ್ಧೆ ಮಾಡಲಿರುವ ಚಿತ್ತಾಪುರದಲ್ಲಿ ಕೋಲಿ ಸಮುದಾಯವೇ ನಿರ್ಣಾಯಕ.
 
ಬಹುಸಂಖ್ಯಾತ ಕೋಲಿ ಸಮುದಾಯದ ಮತದಾರರು ಇರುವ ಚಿತ್ತಾಪುರದಲ್ಲಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿದ್ದ ಚಿಂಚನಸೂರ ಗ್ರೌಂಡ್ ಲೆವಲ್ನಿಂದ ಕೆಲಸ ಮಾಡಿ, ಕಾರ್ಯಕರ್ತರ ಪಡೆ ಕಟ್ಟಿದ್ದಾರೆ. ಹೀಗಾಗಿ ಪ್ರಿಯಾಂಕ್ ಖರ್ಗೆ ಗೆಲ್ಲಬೇಕಾದ್ರೆ ಚಿಂಚನಸೂರ್ ಕಾಂಗ್ರೆಸ್ಗೆ ಅನಿವಾರ್ಯ. ಇತ್ತ ಬಿಜೆಪಿ ನಾಯಕರೂ ಸಹಿತ ಈ ಬಾರಿ ಶತಾಯಗತಾಯ ಪ್ರಿಯಾಂಕ್ ಖರ್ಗೆ ಸೋಲಿಸಬೇಕು ಅನ್ನೋ ಜಿದ್ದಿಗೆ ಬಿದ್ದಿದ್ದಾರೆ.

ಕಾಂಗ್ರೆಸ್ ತಮ್ಮ ಮಾನಸ ಪುತ್ರನನ್ನ ಗೆಲ್ಲಿಸಲು ಚಿಂಚನಸೂರ್ ಅಗತ್ಯತೆ ಇದ್ದಿದ್ದರಿಂದ ಕೆಲವು ಕಂಡೀಷನ್ಗಳನ್ನ ಹಾಕಿ ಈಗ ಕಾಂಗ್ರೆಸ್ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದು, ಇದೇ 25ರಂದು ಮತ್ತೆ ಕೈ ಹಿಡಿಯೋದು ಪಕ್ಕಾ ಆಗಿದೆ. ಯಾದಗಿರಿಯ ಗುರುಮಠಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೈದಾಪುರದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅಭಿನಂದನಾ ಬೃಹತ್ ಸಮಾವೇಶವಿದ್ದು, ಅಂದೇ ʼಕೈʼ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ