ವಾಟರ್ ಸ್ಟೋರೇಜ್ ಮಾಡಲು ಹಣ ಕೇಳಿದ್ದು ನಿಜ- ಪರಮೇಶ್ವರ್

ಸೋಮವಾರ, 18 ಡಿಸೆಂಬರ್ 2023 (15:40 IST)
ವಾಟರ್ ಸ್ಟೋರೇಜ್ ಮಾಡಲು ಪರಮೇಶ್ವರ್ ಹೆಚ್ಚಿನ ಪರಿಹಾರಹಣ ಕೇಳಿದ್ರೂ ಅನ್ನೋ ವಿಚಾರವಾಗಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು,ಹಾಗೇ ಏನ್ ಇಲ್ಲ,ಹಣ ಕೇಳಿದ್ದು ನಿಜ.ದೊಡ್ಡಬಳ್ಳಾಪುರದಲ್ಲಿ ಬಪರ್ ಡ್ಯಾಮ್ ಕಟ್ಟುವಾಗ  ಅರ್ಧದಷ್ಟು ದೊಡ್ಡಬಳ್ಳಾಪುರ ಕ್ಕೆ ಬರ್ತಾಯಿತ್ತು.ಉಳಿದ ಅರ್ಧ ಭಾಗ ಕೊರಟಗೆರೆ ಗೆ ಬರ್ತಾಯಿತ್ತು .ದೊಡ್ಡಬಳ್ಳಾಪುರ ಭಾಗಕ್ಕೆ ೩೨ ಲಕ್ಷ ಏನೋ ಫೀಕ್ಸ್ ಮಾಡಿದ್ರೂ.ಕೊರಟಗೆರೆ ಭಾಗಕ್ಕೆ ೮ , ೧೨ ಲಕ್ಷ ಹೀಗೆ ಫೀಕ್ಸ್ ಮಾಡಿದ್ರೂ.ಕೆರೆ ಒಂದೇ ಇದೆ .

ವಾಟರ್ ಬಾಡಿ , ವಾಟರ್ ಸ್ಟೋರೇಜ್ ಒಂದೇ ಇದೆ ಅರ್ಧಕೆರೆಗೆ ಒಂದು ರೆಟ್ಟು ಇನ್ನ ಅರ್ಧಕ್ಕೆ ಇನ್ನೊಂದು ರೆಟ್ಟು ಮಾಡೊದು ಬೇಡ .ಎರಡಕ್ಕೂ ಒಂದೇ ರೆಟ್ಟು ಕೊಡಿ ಕುಡಿಯುವ ನೀರಿನ ಪ್ರೊಜೆಕ್ಟ್ ಇದು, ಅಂತ ಹೇಳಿ ನಾವು ಒತ್ತಾಯ ಮಾಡಿದ್ವಿ.ಅದರ ಜೊತೆಗೆ ರೈತರು ನಮ್ಮ ಊರಿನಲ್ಲಿ ಮಾಡಬೇಡಿ ನಮ್ಮ ಭೂಮಿ ಹೊರಟು ಹೋಗುತ್ತೆ ಅಂತ ಹೇಳಿದ್ರೂ.ಎರಡೂವರೆ ಸಾವಿರ ಎಕರೆ ಕಳೆದುಕೊಳ್ಳಬೇಕಾಗುತ್ತೆ ಅಂದಿದ್ದರು.ನಾನು ಎರಡು ಭಾರಿ  ರೈತರ  ಬಳಿ ಹೋಗಿ ಪ್ರಯತ್ನ ಮಾಡ್ದೆ ಅವರ ಒಪ್ಪಲಿಲ್ಲ.ಆ ಕಾರಣಕ್ಕಾಗಿ ಅದನ್ನ ಶಿಪ್ಟ್ ಮಾಡಿ ಎರಡು ಕಡೆ ಮಾಡೋ ತರ ಇದೆ.ಯೋಜನೆ ಪೂರ್ಣ ಆಗುತ್ತೆ ಎಂದು ಪರಮೇಶ್ವರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ