ಕುರುಬ ಹಾಗೂ ಮುಸ್ಲಿಂ ಸಮುದಾಯಗಳಿಗೆ ಸಚಿವ ಸ್ಥಾನ ದೊರಕದಿರುವುದು ಅತೃಪ್ತಿ ತಂದಿದೆ- ಎಚ್.ಎಂ.ರೇವಣ್ಣ

ಬುಧವಾರ, 6 ಜೂನ್ 2018 (14:43 IST)
ಬೆಂಗಳೂರು : ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಅವರು ಕುರುಬ ಸಮಾಜ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಕಷ್ಟ ಪಟ್ಟ ದುಡಿದಿದ್ದಕ್ಕೆ ನೀಡಿದ ಅಗೌರವ ಇದು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


‘ನಿನ್ನೆ ರಾತ್ರಿಯವರೆಗೂ ಸಚಿವ ಪಟ್ಟಿಯಲ್ಲಿದ್ದ ಹೆಸರು ಮಧ್ಯರಾತ್ರಿ ವೇಳೆಗೆ ಬದಲಾಗಿದೆ. ಈ ಬೆಳವಣಿಗೆ ತಮಗೆ ಆಘಾತ ತಂದಿದೆ. ಕುರುಬ ಹಾಗೂ ಮುಸ್ಲಿಂ ಸಮುದಾಯ ಕಾಂಗ್ರೆಸ್‍ಗೆ 100ಕ್ಕೆ ನೂರರಷ್ಟು ಮತ ನೀಡಿದೆ. ಈ ಎರಡೂ ಸಮುದಾಯಗಳಿಗೆ ಸಚಿವ ಸ್ಥಾನ ದೊರಕದಿರುವುದು ಅತೃಪ್ತಿ ತಂದಿದೆ. ಎರಡೂ ಸಮಾಜಗಳನ್ನು ತುಳಿಯಲು ಕಾಣದ ಕೈಗಳು ಕೆಲಸ ಮಾಡಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ