ವೀಕೆಂಡ್ ನಲ್ಲಿ ಸರ್ಕಾರಿ ಸಾರಿಗೆ ಬಸ್ ಗಳಲ್ಲಿ ಮಹಿಳೆಯದ್ದೇ ದರ್ಬಾರ್...!

ಸೋಮವಾರ, 26 ಜೂನ್ 2023 (15:25 IST)
ವೀಕೆಂಡ್ ನಲ್ಲಿ ಸರ್ಕಾರಿ ಸಾರಿಗೆ  ಬಸ್ಗಳಲ್ಲಿ ಮಹಿಳೆಯದ್ದೇ ದರ್ಬಾರ್ ಶುರುವಾಗಿದೆ.ಇನ್ಮೇಲೆ ಪ್ರತಿ ವೀಕೆಂಡ್ ನಲ್ಲಿ ಉಚಿತ ಪ್ರಯಾಣಕ್ಕೆ ಹೊಸ ರೂಲ್ಸ್ ಬರುತ್ತಾ..? ಅನ್ನುವ ಪ್ರಶ್ನೆ ಶುರುವಾಗಿದೆ.ಶಕ್ತಿ ಯೋಜನೆಯಲ್ಲಿ ಕೆಲ ಮಾರ್ಪಾಡು ತರಲು ಗಂಭೀರ ಚಿಂತನೆ ಸರ್ಕಾರ ನಡೆಸಿದೆ.ಪ್ರತಿ ವೀಕೆಂಡ್ ನಲ್ಲಿಯೂ ನಾಲ್ಕು ಸಾರಿಗೆ ಬಸ್ ಗಳಲ್ಲಿ ಒತ್ತಡ ಹೆಚ್ಚಿದೆ.ಹೀಗಾಗಿ ವೀಕೆಂಡ್ ನಲ್ಲಿ ಮಹಿಳೆಯರ  ಓಡಾಟಕ್ಕೆ ಶೀಘ್ರದಲ್ಲೇ ಲಗಾಮು ಹಾಕಲು ಚಿಂತಿಸಲಾಗಿದೆ.ತಿಂಗಳಾಂತ್ಯದೊಳಗೆ ಶಕ್ತಿ ಯೋಜನೆಗೆ ಹೊಸ ರೂಲ್ಸ್ ಬರಲಿದೆ.ಶಕ್ತಿ ಯೋಜನೆಯಲ್ಲಿ ರೂಲ್ಸ್ ಮಾರ್ಪಾಡು ಗೆ ಸಾರಿಗೆ ನಿಗಮಗಳಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.ವೀಕೆಂಡ್ ನಲ್ಲಿ ನಾಲ್ಕು ಸಾರಿಗೆ ನಿಗಮದ ಬಸ್ ಗಳ ಹೌಸ್ ಪುಲ್ ಗೆ ಕಡಿವಾಣ ಹಾಕಲಾಗುತ್ತೆ.ಬಸ್ ಗಳಲ್ಲಿ ರಷ್‌ ನಿಯಂತ್ರಿಸಲು ಕಠಿಣ ಷರತ್ತು  ಪ್ಲ್ಯಾನ್‌ ರಾಜ್ಯ ಸರ್ಕಾರ ರೆಡಿ ಮಾಡ್ತಿದೆ.
 
ಹಾಗಾದರೆ ಇನ್ಮೇಲೆ ವೀಕೆಂಡ್ ನಲ್ಲಿ ಮಹಿಳೆಯರ ಟೆಂಪಲ್ ರನ್ಗೆ ಬೀಳುತ್ತಾ ಬ್ರೇಕ್ ‌.?ವೀಕೆಂಡ್ ನಲ್ಲಿ ಸಾರಿಗೆ ಬಸ್ ಗಳಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಮಾರ್ಗಸೂಚಿ ಸರ್ಕಾರ ರೆಡಿ ಮಾಡ್ತಿದೆ.ಶೀಘ್ರದಲ್ಲೇ ವೀಕೆಂಡ್‌ ನಲ್ಲಿ ಮಹಿಳೆಯರ  ಸಂಚಾರಕ್ಕೆ ಹೊಸ ರೂಲ್ಸ್‌ ತರಲಿದೆ.ವೀಕೆಂಡ್‌ ರಷ್‌ ತಡೆಯಲು ಮಹಿಳೆಯರ ಉಚಿತ ಪ್ರಯಾಣಕ್ಕೆ ಹೊಸ ರೂಲ್ಸ್‌ ಜಾರಿ ಮಾಡಲಿದೆ
 
ಸರ್ಕಾರ ಬಿಡುಗಡೆ ಮಾಡೋ
ಹೊಸ  ಮಾರ್ಗಸೂಚಿಯಲ್ಲಿ ಏನೇನಿದೆ? ಅಂತಾ ನೋಡುವುದಾದ್ರೆ...
 
-ವೀಕೆಂಡ್ ನಲ್ಲಿ ಬಸ್ ಗಳ ಸಂಖ್ಯೆ ಹೆಚ್ಚಳ
-KSRTCಯಲ್ಲಿ ಪುರುಷರಿಗೆ ಮೀಸಲಿಟ್ಟ ಆಸನಗಳನ್ನ ನಿರ್ವಾಹಕರು ಪುರುಷರಿಗೆ ಸಿಗುವಂತೆ ಮೇಲ್ವಿಚಾರಣೆ
-ನಿಲ್ದಾಣಗಳಲ್ಲಿ ಸರತಿ ಸಾಲಿನಲ್ಲಿ ಬಸ್ ಹತ್ತುವ ವ್ಯವಸ್ಥೆ..
-ವೀಕೆಂಡ್ ನಲ್ಲಿ ನಿಲ್ದಾಣಗಳಲ್ಲಿ ಪೊಲೀಸರ ನಿಯೋಜನೆ ಪ್ಲಾನ್
-ಬಸ್ ಗಳಲ್ಲಿ ಪ್ರಯಾಣಿಕರ ಮಿತಿ ಹೇರುವ ಸಾಧ್ಯತೆ‌
– ದೂರ ದೂರದ ಪ್ರಯಾಣಕ್ಕೆ ಮೊದಲೇ ಟಿಕೆಟ್‌ ಬುಕ್‌ ಮಾಡಬೇಕೆಂದು ಸೂಚನೆ
-ಗುಂಪು ಗುಂಪಾಗಿ ಮಹಿಳೆಯರ ಓಡಾಟಕ್ಕೆ ಕಡಿವಾಣ
ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆಗೆ ಮಿತಿ ನಿಗದಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ