ಇಂದಿನಿಂದ 29 ರವರೆಗೆ ರಾಜ್ಯದ ಹಲವೆಡೆ ಮಳೆ

ಸೋಮವಾರ, 26 ಜೂನ್ 2023 (14:52 IST)
ಬೆಂ,ನಗರ, ಬೆಂ,ಗ್ರಾಮಾಂತರ ಜಿಲ್ಲೆಯಲ್ಲಿ ಇಂದಿನಿಂದ 29ರವರೆಗೆ ಮಳೆಯಾಗಲಿದೆ.ನಗರದಲ್ಲಿ ಇಂದು ಮೋಡ ಕವಿದ ವಾತಾವರಣ ಇರಲಿದೆ.ಬೆಂ,ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಜೂ 26 ರಿಂದ 29ರವರೆಗೆ ಮಳೆಯಾಗುವ ಸಾಧ್ಯತೆ ಇದೆ.ಜೂ.26ರಂದು ಮೋಡ ಮುಸುಕಿದ ವಾತಾವರಣ, ಗುಡುಗು, ಮಿಂಚು ಮತ್ತು ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
 
ಬಲವಾದ ಗಾಳಿ ಬೀಸುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ್ದು, ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿ ಯಸ್ ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಇನ್ನೂ ನಗರದಲ್ಲಿ  ನಿನ್ನೆ ಸುರಿದ ಮಳೆಯಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.ಸಂಜೆಯಾಗ್ತಿದಂತೆ  ಕೆಲವು ಕಡೆಗಳಲ್ಲಿ ಮಳೆ ಸುರಿಯಿತು. ಬಾಗಲಗುಂಟೆ, ಪೀಣ್ಯ, ನಂದಿನಿ ಲೇಔಟ್, ಮಾರಪ್ಪ ಪಾಳ್ಯ, ವಿದ್ಯಾರಣ್ಯಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.
 
 
ಇನ್ನೂ ನಗರದಲ್ಲಿ ಎಲ್ಲೇಲ್ಲಿ ಎಷ್ಟು ಮಳೆಯಾಗಿದೆ ಅಂತಾ ನೋಡುವುದಾದ್ರೆ
 
• ಪೀಣ್ಯ ಕೈಗಾರಿಕಾ ಪ್ರದೇಶ - 29.50 ಮಿ.ಮೀ
•  ಬಾಗಲಗುಂಟೆ  - 28.50 ಮಿ.ಮೀ
•  ಶೆಟ್ಟಿಹಳ್ಳಿ - 27.50 ಮಿ.ಮೀ
• ದೊಡ್ಡಬಿದರೆಕಲ್ಲು - 25.50 ಮಿ.ಮೀ
• ನಂದಿನಿ ಲೇಔಟ್  ಮತ್ತು ನಾಗ ಪುರ - 21 ಮಿ.ಮೀ
•  ಕೊಟ್ಟಿಗೆಪಾಳ್ಯ - 20.50 ಮಿ.ಮೀ
• ಹೆಗ್ಗನಹಳ್ಳಿ ಮತ್ತು ರಾಜಮಹಲ್ ಗುಟ್ಟಹಳ್ಳಿ ತಲಾ -  18 ಮಿ.ಮೀ
• ಹೊರಮಾವು - 13.50 ಮಿ.ಮೀ
• ಹೆರೋಹಳ್ಳಿ - 13.50 ಮಿ.ಮೀ
• ದಯಾನಂದನಗರ, ರಾಜಾಜಿನಗರ ತಲಾ - 13 ಮಿ. ಮೀ
• ಮಾರಪ್ಪಪಾಳ್ಯ, ವಿದ್ಯಾರಣ್ಯಪುರ ತಲಾ - 11.50 ಮಿ.ಮೀ
•  ಜಕ್ಕೂರು, ಯಲಹಂಕ ತಲಾ - 10.50 ಮಿ.ಮೀ 
• ಕೊಡಿಗೇಹಳ್ಳಿ, ಬಾಣಸ ವಾಡಿ ತಲಾ - 10 ಮಿ.ಮೀ ಮಳೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ