ರೇಣುಕಾಸ್ವಾಮಿಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದೇ ಪವಿತ್ರಾ ಗೌಡ ಅಂತೇ

sampriya

ಭಾನುವಾರ, 16 ಜೂನ್ 2024 (11:01 IST)
Photo By X
ಬೆಂಗಳೂರು: ನಟ ದರ್ಶನ್‌ ಅವವ ಆರೋಪ ಎದುರಿಸುತ್ತಿರುವ ರೇಣುಕಸ್ವಾಮಿ ಹತ್ಯೆ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದ್ದು, ಇದೀಗ ಪ್ರಕರಣ ಸಂಬಂಧ ಪ್ರಮುಖ ಸಾಕ್ಷ್ಯಗಳು ಲಭ್ಯವಾಗುತಿರುವ ಬಗ್ಗೆ ಮೂಲಗಳಿಂದ ತಿಳಿದುಬಂದಿದೆ.

ಈ ಪ್ರಕರಣ ಸಂಬಂಧ ನಟ ದರ್ಶನ್‌, ಗೆಳತಿ ಪವಿತ್ರಾ ಗೌಡ ಸೇರಿದಂತೆ ಈಗಾಗಲೇ ಬಂಧಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಅದಲ್ಲದೆ ರೇಣುಕಾಸ್ವಾಮಿ ಅವರಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡುವಲ್ಲಿ ಪ್ರತಿಯೊಬ್ಬ ಆರೋಪಿಯು ಒಂದೊಂದು ಪಾತ್ರ ನಿರ್ವಹಿಸಿರುವ ಬಗ್ಗೆ ವಿಚಾರಣೆಯಲ್ಲಿ ತಿಳಿದುಬಂದಿದೆ.

ಇನ್ನೂ ಸಾಕ್ಷ್ಯಗಾಗಿ ಪಟ್ಟಣಗೆರೆಯ ಶೆಡ್‌ನಲ್ಲಿ ಬಿದ್ದಿದ್ದ ರೇಣುಕಸ್ವಾಮಿ ತಲೆಕೂದಲು, ರಕ್ತದ ಮಾದರಿ ಸಂಗ್ರಹಿಸಲಾಗಿದೆ. ಆರೋಪಿಗಳ ಮೊಬೈಲ್‌ ಲೊಕೇಶನ್‌ ಪರಿಶೀಲಿಸಲಾಗಿದೆ. ಇನ್ನೂ ರೇಣುಕಸ್ವಾಮಿ ಹತ್ಯೆಯಾದ ಜೂನ್‌ 8ರಂದು ರಾತ್ರಿ ಎಲ್ಲರೂ ಒಂದೇ ಟವರ್‌ ವ್ಯಾಪ್ತಿಯಲ್ಲಿ ಇರುವುದು ಪತ್ತೆಯಾಗಿದೆ. ಅದಲ್ಲದೆ ಪವನ್ ಹಾಗೂ ಪವಿತ್ರಾಗೌಡ ಹೇಳಿದಂತೆ ಚಿತ್ರದುರ್ಗದಿಂದ ರೇಣುಕಸ್ವಾಮಿ ಅವರನ್ನು ಕರೆತರಲಾಗಿತ್ತು ಎಂದು ಆರೋಪಿ ರಾಘವೇಂದ್ರ ಹೇಳಿಕೆಯೊಂದು ಮಹತ್ವದ ಸಾಕ್ಷಿ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ