ಯಾರ ಸಂಪರ್ಕದಲ್ಲಿ ಯಾರಿದ್ದಾರೆಂದು ಗೊತ್ತಾಗಲಿದೆ
ಬಿಜೆಪಿ ನಾಯಕರ ರಿವರ್ಸ್ ಆಪರೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾರ ಸಂಪರ್ಕದಲ್ಲಿ ಯಾರಿದ್ದಾರೆಂದು ಸ್ವಲ್ಪ ದಿನದಲ್ಲಿ ಗೊತ್ತಾಗಲಿದೆ. ಸಂವಿಧಾನಾತ್ಮಕವಾಗಿ ವಿರೋಧ ಪಕ್ಷದ ನಾಯಕ ಇರಬೇಕು. ಅವರ ಪಕ್ಷದಲ್ಲಿ ಆಂತರಿಕ ವಿಚಾರ ಹೇಗಿದೆ ಎಂದು ಗೊತ್ತಾಗುತ್ತದೆ. ಕರ್ನಾಟಕದ ಇತಿಹಾಸದಲ್ಲಿ ಎಂದೂ ಈ ರೀತಿ ಆಗಿರಲಿಲ್ಲ. ಒನ್ ನೇಷನ್, ಒನ್ ಎಲೆಕ್ಷನ್ ಚರ್ಚೆ ವಿಚಾರಕ್ಕೆ ಮೆಜಾರಿಟಿ ಇದೆ ಎಂದು ಏನೇನೋ ತೀರ್ಮಾನ ಮಾಡ್ತಿದ್ದಾರೆ. ಒಕ್ಕೂಟದ ವ್ಯವಸ್ಥೆಯನ್ನ ನೋಡಬೇಕಾಗುತ್ತದೆ. ಸ್ಟೇಟ್ ಹಾಗೂ ಸೆಂಟ್ರಲ್ ರಿಲೇಷನ್ಶಿಪ್ ಚೆನ್ನಾಗಿರಬೇಕು ಎಂದು ಡಾ.B.R.ಅಂಬೇಡ್ಕರ್ ಹೇಳಿದ್ದಾರೆ. ಹಲವು ರಾಜ್ಯಗಳಲ್ಲಿ ಟೆಸ್ಟ್ ಕೂಡ ಆಗಿದೆ. ರಾಷ್ಟ್ರವಾಗಿ ಉಳಿಯಲು ಎಲ್ಲಾ ರಾಜ್ಯಗಳ ಸಲಹೆ ಪಡೆಯಬೇಕಾಗುತ್ತದೆ ಎಂದರು.