ಚಂದ್ರಯಾನ 3 ಲ್ಯಾಂಡಿಂಗ್ ಗೆ ಶುಭ ಕೋರಿದ ಸಚಿವರು...!

ಮಂಗಳವಾರ, 22 ಆಗಸ್ಟ್ 2023 (17:08 IST)
ಚಂದ್ರಯಾನ 3 ಲ್ಯಾಂಡಿಂಗ್ ಗೆ ಕ್ಷಣಗಣೆನೆ ಶುರುವಾಗಿ ಈ ಹಿನ್ನಲೆ ಅನೇಕ ನಾಯಕರು ಶುಭ ಕೊರುತ್ತಿದ್ದಾರೆ ಈ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಸದಾಶಿವನಗರದಲ್ಲಿ ಮಾತನಾಡಿದ ಅವರು ಚಂದ್ರಯಾನಕ್ಕಿಂತ ದೊಡ್ಡದು ಯಾವುದಿದೆ. ಬಹಳ ಸಂತೋಷದ ವಿಚಾರವಾಗಿದೆ ಎಂದರು.ಇನ್ನೂ ಚಂದ್ರಯಾನದ ಕುರಿತು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದ ನಟ ಪ್ರಕಾಶ ರೈ ಕುರಿತು ಪ್ರತಿಕ್ರಿಯಿಸಿದ ಅವರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದವರಿಗೆ ಚಂದ್ರಯಾನ 3  ಅಂದ್ರೆ ಎನಂತ ಗೊತ್ತಾಗಿಲ್ಲ. ಚಿಕ್ಕಮಕ್ಕಳಾಗಿದ್ದಾಗ ಚಂದ್ರನ ನೋಡು ಅಂತಾರಲ್ಲ ಅವರು ಅಲ್ಲೇ ಇದ್ದಾರೆ ಎಂದರು.
 
ಆರೋಗ್ಯ ಸಚಿವ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ನಾಳೆ ಲ್ಯಾಂಡ್ ಆಗಲು ಸಮಯ ನಿಗದಿಯಾಗಿದೆ.ನಮ್ಮ ದೇಶದ ವಿಜ್ಞಾನಕ್ಕೆ ಹೆಮ್ಮೆಯಶಸ್ವಿಯಾಗಿ ಲ್ಯಾಂಡ್ ಆಗಲಿ.ನಮ್ಮ ದೇಶಕ್ಕೆ ಗರ್ವ ಬರುವ ವಿಚಾರ.ಈ ಕಾರ್ಯದಲ್ಲಿ ಭಾಗಿಯಾದ ವಿಜ್ಞಾನಿಗಳಿಗೆ ಸೇರಿ ಎಲ್ಲರಿಗೂ ಅಭಿನಂದನೆಗಳು. ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ