ಕೆರೆ ಡಿನೋಟಿಫೈ, ಇದೊಂದು ನಾಚಿಕೆಗೇಡಿನ ಸರಕಾರ: ಕುಮಾರಸ್ವಾಮಿ

ಬುಧವಾರ, 19 ಜುಲೈ 2017 (19:57 IST)
ರಾಜ್ಯದಲ್ಲಿ ಒಣಗಿದ ಕೆರೆಗಳನ್ನು ಡಿನೋಟಿಫೈ ಮಾಡುವ ಸರಕಾರದ ನಿರ್ಧಾರ ನಾಚಿಕೆಗೇಡು ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.
 
ಹಿರಿಯ, ಅನುಭವಿ ನಾಯಕರಾದ ಸಚಿವ ಕಾಗೋಡು ತಿಮ್ಮಪ್ಪ ಅವರಿಂದ ಇಂತಹ ನಿರ್ಧಾರ ನಾನು ನಿರೀಕ್ಷಿಸಿರಲಿಲ್ಲ. ಕೆರೆಗಳನ್ನು ಪುನರ್ಜಿವಗೊಳಿಸುವುದು ಬಿಟ್ಟು ಲೇಔಟ್‌ಗಳನ್ನಾಗಿ ಮಾಡಿದಲ್ಲಿ ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.
 
ಕೆರೆಗಳನ್ನು ಲೇಔಟ್ ಮಾಡಬೇಕಾಗಿದ್ದಲ್ಲಿ ರಾಜಕಾಲುವೆ ಒತ್ತುವರಿ ಏಕೆ ತೆರುವುಗೊಳಿಸಬೇಕಿತ್ತು. ಸರಕಾರ ಕೆರೆಗಳನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಸಲಹೆ ನೀಡಿದ್ದಾರೆ.
 
ಒಣಗಿದ ಕೆರೆಗಳನ್ನು ಲೇಔಟ್‌ಗಳನ್ನು ಮಾಡಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಾಭ ಮಾಡಿಕೊಂಡುವ ಹುನ್ನಾರವಾಗಿದೆ ಎಂದು ಕಿಡಿಕಾರಿದ್ದಾರೆ. 
 
ಲೇಔಟ್‌ಗಳನ್ನು ನಿರ್ಮಿಸಲು ಕೆರೆಗಳನ್ನು ನಾಶಪಡಿಸಲಾಗುತ್ತಿದೆ. ಕೆರೆ ಡಿನೋಟಿಫೈಗೆ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ. ಒಂದು ವೇಳೆ ಸರಕಾರ ಡಿನೋಟಿಫೈಗೆ ಮುಂದುವರಿದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ