ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಗೆ ಜಲ ದಿಗ್ಭಂದನ

ಶುಕ್ರವಾರ, 19 ನವೆಂಬರ್ 2021 (21:01 IST)
rain
ಬೆಂಗಳೂರು: ರಾಜ್ಯಾದೆಂತ ಮಳೆ ಅಬ್ಬರ ಹೆಚ್ಚಾಗಿದ್ದು, ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನಲ್ಲೂ ಕಟ್ಟಡಗಳಲ್ಲಿ ನೀರು ತುಂಬಿರುವ ಪ್ರಕರಣಗಳು ಸಾಕಷ್ಟು ವರದಿಯಾಗಿದೆ. ನಗರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಗೆ ಬಹುತೇಕ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ತೇವಾಂಶ ಹೆಚ್ಚಳದಿಂದಾಗಿ ಹಲವು ಹಳೆಯ ಕಟ್ಟಡಗಳು ಶಿಥಿಲವಾಗುತ್ತಿವೆ. ಇದೇ ರೀತಿ ಮಳೆ ಮುಂದುವರೆದರೆ ಬೆಂಗಳೂರಿನಲ್ಲಿ ಹಳೆಯ ಕಟ್ಟಡಗಳು ಕುಸಿಯುವ ಆತಂಕ ಮನೆ ಮಾಡಿದೆ.
 
ಯಲಹಂಕ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಗೆ ಜಲ ದಿಗ್ಭಂದನ ಎದುರಾಗಿದೆ. ನೀರಿನಲ್ಲಿ ಮುಳುಗಿರುವ ಕಾರು, ಬೈಕ್, ಸೈಕಲ್ ಕಂಡುಬರುತ್ತಿವೆ. ಆಟಿಕೆಗಳ ರೀತಿಯಲ್ಲಿ ವಾಹನಗಳು ನೀರಿನಲ್ಲಿ ತೇಲುತ್ತಿವೆ. 
 
ಸಿಲಿಕಾನ್ ಸಿಟಿಯ ಯಲಹಂಕದ ಕೋಗಿಲು ಕ್ರಾಸ್ ಬಳಿಯ ಕೇಂದ್ರೀಯ ವಿಹಾರ ಇದ್ದು, 8 ಬ್ಲಾಕ್ ಗಳು, ಪ್ರತೀ ಬ್ಲಾಕ್ ನಲ್ಲೂ 80 ಫ್ಲಾಟ್ ಗಳಿವೆ. ಒಟ್ಟು 603 ಫ್ಲಾಟ್ ಗಳನ್ನು ಒಳಗೊಂಡಿರುವ ಅಪಾರ್ಟ್ಮೆಂಟ್ ನಲ್ಲಿ ಬರೋಬ್ಬರಿ 3 ಸಾವಿರಕ್ಕೂ ಅಧಿಕ ನಿವಾಸಿಗಳು ವಾಸವಾಗಿದ್ದಾರೆ. ನಿನ್ನೆಯಿಂದ ದಿನವಿಡೀ ಸುರಿಯುತ್ತಿರುವ ಭಾರೀ ಮಳೆಗೆ ಅಪಾರ್ಟ್ಮೆಂಟ್ ಪಕ್ಕದಲ್ಲಿರುವ ಅಮ್ಮಾನಿ ಕೆರೆ ಭರ್ತಿಯಾಗಿದೆ. ಕೆರೆಯ ಕೋಡಿ ಒಡೆದಿರುವ ರಭಸಕ್ಕೆ ಅಪಾರ್ಟ್ಮೆಂಟ್ ಬೇಸ್ಮೆಂಟ್ ಸಂಪೂರ್ಣ ಜಲಾವೃತಗೊಂಡಿದೆ.
 
ಬೀಚ್ ನಂತಾದ ಅಪಾರ್ಟ್ಮೆಂಟ್ ಬೇಸ್ಮೆಂಟ್: 
 
 
ಬೇಸ್ಮೆಂಟ್ ನಲ್ಲಿ ಅಲೆಗಳ ರೀತಿಯಲ್ಲಿ ಮಳೆ ನೀರು ಕಾಣುತ್ತಿದೆ. ಕಾರನ್ನು ತಳ್ಳಿಕೊಂಡ ನಿವಾಸಿಗಳು ಹೋಗುತ್ತಿದ್ದಾರೆ ಎಂದು ಪ್ರತ್ಯೇಕ್ಷ ದರ್ಶಿಗಳು ತಿಳಿಸಿದ್ದಾರೆ.  
 
ಬೇಸ್ಮೆಂಟ್ ನಲ್ಲಿ ನಿಂತಲ್ಲೇ ನಿಂತ ನೀರು: 
 
 
ಇಂಜಿನ್ ಸೀಜ್ ಆಗುವ ಭೀತಿಯಲ್ಲಿ ವಾಹನ ಮಾಲೀಕಾರಿದ್ದು, ಅಪಾರ್ಟ್ಮೆಂಟ್ ಬೇಸ್ಮೆಂಟ್ ನಲ್ಲಿರುವ ಕಾರು, ಬೈಕ್ ಗಳನ್ನ ಹೊರ ತರಲು ಯತ್ನಿಸುತ್ತಿದ್ದಾರೆ. ಬಿಟ್ಟು ಬಿಟ್ಟು ಸುರಿಯುತ್ತಿರುವ 3 ಭಾರಿಯ ಮಳೆಯ ನೀರು ಬೇಸ್ಮೆಂಟ್ ನಲ್ಲೇ ನಿಂತಿದೆ ಎನ್ನುತ್ತಿದ್ದಾರೆ.
 
ಪವರ್ ಕಟ್: 
 
ಸದ್ಯ ಅಪಾರ್ಟ್ಮೆಂಟ್ ನ ಸಂಪೂರ್ಣ ಪವರ್ ಕಟ್ ಮಾಡಿಸಲಾಗಿದೆ. 2001 ರಲ್ಲಿ ನಿರ್ಮಾಣವಾಗಿರುವ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಗೆ ನಿನ್ನೆ ತಡರಾತ್ರಿ 1 ಗಂಟೆಗೆ ಮಳೆನೀರು ನುಗ್ಗಿದೆ. ಸುಮಾರು 300 ಎಕರೆ ವಿಸ್ತೀರ್ಣವಿರುವ ಅಮ್ಮಾನಿ ಕೆರೆ ಕಟ್ಟೆ ಒಡೆದು ಈ ಅವಾಂತರ ಸೃಷ್ಟಿಯಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ