ಜೇಮ್ಸ್ ಚಿತ್ರ ತಂಡ ಸಿನಿಮಾವನ್ನು ಸಂಪೂರ್ಣವಾಗಿ ಅಪ್ಪು ಧ್ವನಿಯಲ್ಲೇ ಡಬ್ಬಿಂಗ್ ಮಾಡಿ ರೀ-ರಿಲೀಸ್‌ಗೆ ಪ್ಲಾನ್ ಮಾಡಿದೆ. ಹೊಸದೊಂದು ಆವಿಷ್ಕಾರದ ಮೂಲಕ ಅಪ್ಪು ಧ್ವನಿಯ ಮಾದರಿಯಿಂದ ಇಡೀ ಸಿನಿಮಾದ ಡಬ್ಬಿಂಗ್ ಅನ್ನು ಮಾಡಲಾಗುತ್ತಿದೆ. ಈ ಹಿಂದೆ ಶಿವಣ್ಣ ನೀಡಿದ್ದ ಧ್ವನಿಯನ್ನು ತೆಗೆದು ಆ ಜಾಗದಲ್ಲಿ ಹೊಸ ಟೆಕ್ನಾಲಜಿ ಮುಖಾಂತರ ಮಾಡಲಾಗುತ್ತಿರುವ ಅಪ್ಪು ಧ್ವನಿಯನ್ನು ಕೂರಿಸಲಾಗುತ್ತಿದೆ ಎಂದು ಜೇಮ್ಸ್ ಸಿನಿಮಾ ನಿರ್ದೇಶಕ ಚೇತನ್ ಕುಮಾರ್ ತಿಳಿಸಿದ್ದಾರೆ. ಅಪ್ಪು ಅಗಲಿಕೆಗೂ ಮುನ್ನ ಜೇಮ್ಸ್ ಸಿನಿಮಾದ ಕೆಲವು ಡಬ್ಬಿಂಗ್ ಪಾರ್ಟ್ಗಳು ಬಾಕಿ ಉಳಿದಿದ್ದು, ಅವರ ಅಣ್ಣ ಶಿವರಾಜ್‌ಕುಮಾರ್ ಧ್ವನಿಯಲ್ಲಿ ಅದನ್ನು ಕಂಪ್ಲೀಟ್ ಮಾಡಿ ರಿಲೀಸ್ ಮಾಡಲಾಗಿತ್ತು. ಅಭಿಮಾನಿಗಳು ಅಪ್ಪು ಚಿತ್ರದಲ್ಲಿ ಶಿವಣ್ಣನ ಧ್ವನಿಯನ್ನು ಮೆಚ್ಚಿದ್ದರೂ ಎಲ್ಲೋ ಒಂದೆಡೆ ಪುನೀತ್ ಧ್ವನಿ ಇದ್ರೇನೆ ಚೆನ್ನಾಗಿರುತ್ತಿತ್ತು ಎಂಬ ನಿರಾಸೆ ಇತ್ತು. ಆದರೆ ಇದೀಗ ಜೇಮ್ಸ್ ತಂಡ ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ.