ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ತಮ್ಮ ಪುತ್ರಿಯ ಅದ್ಧೂರಿ ವಿವಾಹದಲ್ಲಿ ಪಕ್ಕಾ ಹಳೆಯ ನೋಟುಗಳನ್ನೆ ಬಳಸಿದ್ದಾರೆ ಎಂದು ಹೇಳಲಾಗುತ್ತಿದ್ದು, ರೆಡ್ಡಿ ತಮ್ಮ ಪುತ್ರಿಯ ಅದ್ಧೂರಿ ವಿವಾಹವನ್ನು ಕಪ್ಪು ಹಣದಲ್ಲಿಯೇ ಮಾಡಿದ್ದಾರಾ ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಜನಾರ್ದನ ರೆಡ್ಡಿ ಮಗಳ ಮದುವೆಗೆ ಬ್ಯಾನ್ ಮಾಡಿದ ನೋಟಿನ ಜೊತೆಗೆ ಹೊಸ ನೋಟುಗಳನ್ನು ಖರ್ಚು ಮಾಡಿದ್ದಾರೆ. ಮದುವೆ ಮಂಟಪ ಸೇರಿದಂತೆ ವಿಜಯನಗರದ ಸೆಟ್, ಅಡುಗೆ, ಹೂವಿನ ಅಲಂಕಾರದವರಿಗೆಲ್ಲ ಬ್ಯಾನ್ ಆಗಿರೋ ಹಳೆ ನೋಟುಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ.
ಅಕ್ರಮ ಗಣಿ ಆರೋಪದಲ್ಲಿ ಜೈಲು ಪಾಲಾಗಿದ್ದ ಜನಾರ್ದನ ರೆಡ್ಡಿ ಪುತ್ರಿಯ ಅದ್ಧೂರಿ ವಿವಾಹದ ಕುರಿತು ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಚರ್ಚೆ ನಡೆದಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣದ ವಿರುದ್ಧ ಸಮರ ಸಾರಿದ ಬೆನ್ನಲ್ಲೆ ಅವರದೆ ಪಕ್ಷದ ನಾಯಕರೊಬ್ಬರು ಇಂತಹ ಅದ್ಧೂರಿ ವಿವಾಹವನ್ನು ಮಾಡಿರುವುದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು.