ಉಪ ಚುನಾವಣೆ ಈ ಬಾರಿ ಚಡ್ಡಿ ಹಾಕಿ ಅಖಾಡಕ್ಕೆ ಇಳಿದಿದ್ದೇವೆ. ಬಾಳಿಕಾಯಿ ಕುಸ್ತಿ ಆಗೋದಿಲ್ಲ.
ಈ ಚುನಾವಣೆ ನಿಶಾನೆ ಕುಸ್ತಿ ಆಗಲಿದೆ. ಹೀಗಂತ ಮಾಜಿ ಸಚಿವ ಜಾರಕಿಹೊಳಿ ಹೇಳಿದ್ದಾರೆ.
ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದ್ದು, ರಮೇಶ ಜಾರಕಿಹೊಳಿ ಹಾಗೂ ನನ್ನ ನಡುವೆ ಸಹೋದರತ್ವ ಇದ್ದೆ ಇರುತ್ತೆ.
ರಾಜಕೀಯ ಭಾಷಣಕ್ಕಾಗಿ 3 ಈಡಿಯಟ್ಸ್ ಹೇಳಿಕೆ ನೀಡಬೇಕಾಗುತ್ತದೆ. ರಾಜಕೀಯ ಅಂದ್ರೆ ಭಾಷಣ ಮಾಡಲೇಬೇಕು.
ಅರ್ಧಾ ಘಂಟೆ ಮಾತಾಡಲು ಆ ತರಹದ ಹೇಳಿಕೆ ನೀಡಬೇಕಾಗುತ್ತದೆ ಎಂದ್ರು.
ಮೋದಿ, ಯಡಿಯೂರಪ್ಪ ಬಗ್ಗೆ ಮಾತಾಡಿದ್ರೆ ಆಗಲ್ಲ. ಲೋಕಲ್ ಇಶ್ಯೂ ಬಗ್ಗೆ ಮಾತನಾಡಬೇಕಾಗುತ್ತದೆ.
ಗೋಕಾಕಗೆ ಲಖನ್ ಜಾರಕಿಹೊಳಿ ಫೈನಲ್ ಆದ್ರೆ ಹೈ ಕಮಾಂಡ್ ನಿರ್ಧಾರ ಅಂತಿಮ ಆಗುತ್ತೆ ಅಂದ್ರು.
ಗೋಕಾಕ್ ಉಪ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವ್ಯಕ್ತಿಗತ ಅಲ್ಲಾ. ರಾಜಕೀಯ ಭಿನ್ನಾಭಿಪ್ರಾಯ ಇದ್ದೆ ಇರುತ್ತೆ. ಚಡ್ಡಿ ಹಾಕಿ ಅಖಾಡಕ್ಕೆ ಇಳಿದಿದ್ದೇವೆ ಬಾಳಿಕಾಯಿ ಕುಸ್ತಿ ಆಗಲ್ಲಾ. ಈ ಚುನಾವಣೆ ನಿಶಾನೆ ಕುಸ್ತಿ ಆಗಲಿದೆ ಅಂತಂದ್ರು.
ಕಾಗವಾಡ ಮತಕ್ಷೇತ್ರದ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಗೊಂದಲ ಏನೂ ಇಲ್ಲಾ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಂತಿಮ ತೀರ್ಮಾನ ಕೈ ಗೊಳ್ಳುತ್ತೇವೆ. ಕಾರ್ಯಕರ್ತರ ಒಪ್ಪಿದ ಬಳಿಕ ರಾಜು ಕಾಗೆ ಸೇರ್ಪಡೆ ಬಗ್ಗೆ ತೀರ್ಮಾನ ಮಾಡ್ತೇವೆ ಅಂತ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.