ನಾಳೆಯಿಂದ ಬೆಂಗಳೂರಿನಲ್ಲಿ ಜೆಡಿಎಸ್ ಜನತಾಮಿತ್ರ: 17 ದಿನ ಜನ ಸಂಪರ್ಕ ಕಾರ್ಯಕ್ರಮ

ಗುರುವಾರ, 30 ಜೂನ್ 2022 (17:23 IST)
ನಾಳೆಯಿಂದ (ಶುಕ್ರವಾರ) ಜನತಾಮಿತ್ರ ಕಾರ್ಯಕ್ರಮ ರಾಜಧಾನಿಯಲ್ಲಿ ಆರಂಭ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
 
ಪಕ್ಷದ ಮುಖ್ಯ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡದ ಅವರು; ಜನತಾಮಿತ್ರ ಕಾರ್ಯಕ್ರಮಕ್ಕಾಗಿ 15  ವಿಶೇಷ ವಾಹನಗಳನ್ನು ಸಿದ್ಧವಾಗಿವೆ. ಇಡೀ ನಗರದ 28 ವಿಧಾನಸಭೆ ಕ್ಷೇತ್ರಗಳಲ್ಲಿ, ಪ್ರತಿಯೊಂದು ವಾರ್ಡ್ ಗಳಿಗೂ ಹೋಗಲಿರುವ ಈ ವಾಹನಗಳಿಗೆ ನಾಳೆ ಜೆಪಿ ಭವನದಲ್ಲಿ ಹಸಿರು ನಿಶಾನೆ ತೋರಲಾಗುವುದು ಎಂದರು.
 
ಪಕ್ಷಗಳ ಎಲ್ಲ ಮುಖಂಡರು ಈ ವಾಹನಗಳ ಜತೆ  ಹೋಗಬೇಕು. ಪಕ್ಷದ ಮುಖಂಡರೆಲ್ಲ ಪ್ರತ್ಯೇಕ ತಂಡಗಳಾಗಿ ಬೇರ್ಪಟ್ಟು ಸಂಚಾರ ನಗರದಲ್ಲಿರುವ ಮಾಡಬೇಕು. ಎಲ್ಲ ವಾರ್ಡ್ ಗಳಲ್ಲಿಯೂ ಸಭೆಗಳನ್ನು ನಡೆಸಬೇಕು. ಅದಕ್ಕೆ ಅಗತ್ಯವಾದ ಎಲ್ಲ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ