‘ಕೈ’ಗೆ ಮತ ಹಾಕಲು ಜೆಡಿಎಸ್​ ನಾಯಕನ ಕರೆ

ಸೋಮವಾರ, 24 ಏಪ್ರಿಲ್ 2023 (20:30 IST)
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಜೆಡಿಎಸ್​ ನಾಯಕ ಕರೆ ಕೊಟ್ಟಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಹೆಚ್​.ಡಿ.ತಮ್ಮಯ್ಯ ಪರ ಮತಹಾಕುವಂತೆ ಮಾಜಿ ಸಿಎಂ H.D.ಕುಮಾರಸ್ವಾಮಿಗೆ ಆಪ್ತರಾಗಿರುವ ಭೋಜೇಗೌಡ ಕರೆ ನೀಡಿದ್ದಾರೆ.. ಚಿಕ್ಕಮಗಳೂರು ಕ್ಷೇತ್ರದಲ್ಲಿ ತಿಮ್ಮಶೆಟ್ಟಿ ಜೆಡಿಎಸ್​ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಭೋಜೇಗೌಡ ತಿಮ್ಮಶೆಟ್ಟಿಗೆ ಸಾಥ್​ ನೀಡುವ ಬದಲು ಕಾಂಗ್ರೆಸ್​ ಅಭ್ಯರ್ಥಿ H.D. ತಮ್ಮಯ್ಯ ಪರ ಮತ ಹಾಕುವಂತೆ ಸೂಚನೆ ನೀಡಿದ್ದಾರೆ. ಭೋಜೇಗೌಡರು ಸೂಚನೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ