ರಾಜೀನಾಮೆ ಹಿಂಪಡೆದ ಜೆಡಿಎಸ್ ಶಾಸಕ ಪಿಳ್ಳಮುನಿಶಾಮಪ್ಪ

ಶುಕ್ರವಾರ, 24 ಫೆಬ್ರವರಿ 2017 (14:08 IST)
ಜೆಡಿಎಸ್ ಪಕ್ಷಕ್ಕೆ ನಿಸರ್ಗ ನಾರಾಯಣಸ್ವಾಮಿ ಸೇರ್ಪಡೆಯಿಂದ ಬೇಸರಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಪಿಳ್ಳಮುನಿಶಾಮಪ್ಪ, ಇದೀಗ ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ.
 
ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ದೆಹಲಿಯಿಂದ ನೇರವಾಗಿ ಪಿಳ್ಳಶಾಮಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ, ಸಂಧಾನ ಸಭೆ ನಡೆಸಿ ಮನವೊಲಿಸುವಲ್ಲಿ ಯಶಸ್ವಿಯಾದರು.
 
ಇದೇ ವೇಳೆ ದೇವೇಗೌಡರ ಜೊತೆ ಮಾಜಿ ಸಚಿವ ಚನ್ನಿಗಪ್ಪ, ಶಾಸಕರಾದ ನಾರಾಯಣ ಗೌಡ, ಮಾಲೂರು ಮಂಜುನಾಥ್, ರಾಜಣ್ಣ ಮುಂತಾದವರು ಮುನಿಶಾಮಪ್ಪ ನಿವಾಸಕ್ಕೆ ಭೇಟಿ ನೀಡಿದ್ದರು. ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿಯೂ ದೇವೇಗೌಡರು ಖಚಿತ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
 
ಜೆಡಿಎಸ್ ಶಾಸಕರು ಕೂಡಾ ದೇವೇಗೌಡರೊಂದಿಗೆ ಮುನಿಶಾಮಪ್ಪ ಅವರ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸಿದರು. ಮುಂದಿನ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡುವುದಾಗಿಯೂ ದೇವೇಗೌಡರು ಖಚಿತ ಭರವಸೆ ನೀಡಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
 
ನಿಸರ್ಗ ನಾರಾಯಣಸ್ವಾಮಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಕ್ಕೆ ಬೇಸರಗೊಂಡು ರಾಜೀನಾಮೆ ನೀಡಿದ್ದೆ ಎಂದು ಜೆಡಿಎಸ್ ಶಾಸಕ ಮುನಿಶಾಮಪ್ಪ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ