ಗ್ಯಾರಂಟಿ ಮಾದರಿಯಲ್ಲಿ ಪುರುಷರಿಗೆ ವಾರಕ್ಕೆ 2 ಬಾಟಲ್ ಮದ್ಯ ಕೊಡಲು ಜೆಡಿಎಸ್‌ ಶಾಸಕ ಸಲಹೆ

Sampriya

ಬುಧವಾರ, 19 ಮಾರ್ಚ್ 2025 (16:15 IST)
ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಒದ್ದಾಡುತ್ತಿದೆ. ಈ ಮಧ್ಯೆ ಜೆಡಿಎಸ್‌ ಶಾಸಕರೊಬ್ಬರು ಸರ್ಕಾರಕ್ಕೆ ಪುಕ್ಕಟೆ ಸಲಹೆಯೊಂದು ನೀಡಿದ್ದು ಗಮನ ಸೆಳೆದಿದೆ.

ವಿಧಾನಸಭೆಯ ಅಧಿವೇಶನದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ, ಕರ್ನಾಟಕದ ಗ್ಯಾರಂಟಿ ಯೋಜನೆ ಮಾದರಿಯಲ್ಲಿ ಗಂಡಸರಿಗೆ ವಾರಕ್ಕೆ ಎರಡು  ಬಾಟಲ್ ಮದ್ಯ ನೀಡಬೇಕು ಎಂದು ಕಾಂಗ್ರೆಸ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಸಿದ್ದರಾಮಯ್ಯ ಇತ್ತೀಚೆಗೆ ಅಬಕಾರಿ ಆದಾಯ ಗುರಿಯನ್ನು ₹36,500 ಕೋಟಿಯಿಂದ ₹40,000 ಕೋಟಿಗಳಿಗೆ ಹೆಚ್ಚಿಸಿರುವ ಬಗ್ಗೆ ಅವರು ಇತ್ತೀಚೆಗೆ ಪ್ರತಿಕ್ರಿಯಿಸಿದರು.

ಮಹಿಳೆಯರಿಗೆ ಮಾಸಿಕವಾಗಿ ₹ 2,000 ನೀಡುವ ಗ್ಯಾರಂಟಿ ಯೋಜನೆಯಂತೆ  ಪುರುಷರಿಗೂ ವಾರಕ್ಕೆ ಎರಡು ಉಚಿತ ಮದ್ಯದ ಬಾಟಲಿಗಳನ್ನು ವಿತರಿಸಬೇಕು. . ಅವರೂ ಕುಡಿಯಲು ಬಿಡಿ. ಪುರುಷರಿಗೆ ಹಣದ  ಬದಲಾಗಿ ವಾರಕ್ಕೆ ಎರಡು ಬಾಟಲಿಗಳು ನೀಡಲಿ. ಅದರಲ್ಲಿ ತಪ್ಪೇನಿದೆ? ಸರ್ಕಾರವು ಇದನ್ನು ಸೊಸೈಟಿಗಳ ಮೂಲಕ ಒದಗಿಸಬಹುದು ಎಂದು ಕೃಷ್ಣಪ್ಪ ಸಲಹೆ ನೀಡಿದರು.

ಕಾರ್ಮಿಕರು, ಜನರು ಮದ್ಯ ಸೇವಿಸುತ್ತಾರೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಪುರುಷರಿಗೆ ಉಚಿತವಾಗಿ ಮದ್ಯ ವಿತರಿಸುವ ಯೋಜನೆಯನ್ನ ರಾಜ್ಯ ಸರ್ಕಾರ ತರಬೇಕು. ಸಹಕಾರ ಸಂಘಗಳ ಮೂಲಕ ಉಚಿತ ಮದ್ಯ ವಿತರಿಸಬೇಕು ಎಂದರು.  ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ಜೆ. ಜಾರ್ಜ್, ಮದ್ಯಸೇವನೆ ಕಡಿಮೆ ಮಾಡುವುದು ನಮ್ಮ ಸರ್ಕಾರದ ಗುರಿ. ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ನೀವೇ ಫ್ರಿಯಾಗಿ ನೀಡಿ ಎಂದು ತಿರುಗೇಟು ನೀಡಿದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ